ಬೆಂಗಳೂರು: ವೆಬ್ ಸೀರೀಸ್ ನಲ್ಲಿ ಹೀರೋಯಿನ್ ಪಾತ್ರ ನೀಡುವ ನೆಪದಲ್ಲಿ ಯುವತಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಕಿಡಿಗೇಡಿಯೋರ್ವನನ್ನು ಪರಪ್ಪನ ಅಗ್ರಹಾರ ಪೋಲೀಸರು ಬಂಧಿಸಿದ ಘಟನೆ ನಗರದ ಕೂಡ್ಲು ಸಮೀಪ ನಡೆದಿದೆ.
ಆರೋಪಿಯನ್ನು ಮನೀಶ್ ಎಂದು ಗುರುತಿಸಲಾಗಿದೆ. ಈತ ವೆಬ್ ಸೀರೀಸ್ ನಲ್ಲಿ ಹೀರೋಯಿನ್ ಪಾತ್ರ ನೀಡುತ್ತೇನೆಂದು ಯುವತಿಗೆ ಕಾಟ ಕೊಡುತ್ತಿದ್ದ. ಆದರೆ ಯವತಿಯು ಅದನ್ನು ನಿರಾಕರಿಸಿದಾಗ ಪ್ರತಿದಿನ ಕಾರಿನಲ್ಲಿ ಹಿಂಬಾಲಿಸುತ್ತಿದ್ದ. ಇದರಿಂದ ರೋಸಿ ಹೋದ ಯುವತಿಯು ಪೋಲೀಸರಿಗೆ ದೂರು ನೀಡಿದ್ದಾಳೆ.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿಗೆ ಆತ ಇದುವರೆಗೂ ಯಾವುದೇ ವೆಬ್ ಸೀರೀಸ್ ಡೈರೆಕ್ಟ್ ಮಾಡಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಡೈರೆಕ್ಟರ್ ಈಗ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ