Home ಟಾಪ್ ಸುದ್ದಿಗಳು ಕನ್ಯಾಭಾಗ್ಯ ಘೋಷಣೆ ಮಾಡುವಂತೆ ಸಿದ್ದರಾಮಯ್ಯಗೆ ಪತ್ರ ಬರೆದ ಯುವ ರೈತರು

ಕನ್ಯಾಭಾಗ್ಯ ಘೋಷಣೆ ಮಾಡುವಂತೆ ಸಿದ್ದರಾಮಯ್ಯಗೆ ಪತ್ರ ಬರೆದ ಯುವ ರೈತರು

ಹಾವೇರಿ: ಕನ್ಯೆ ಕೊಡಲು ಹಿಂದೇಟು ಹಾಕುತ್ತಿರುವುದಕ್ಕೆ ಬೇಸತ್ತ ಯುವ ರೈತರು, ಸಿಎಂ ಸಿದ್ದರಾಮಯ್ಯ ಪತ್ರ ಬರೆದು ವಿಶೇಷ ಯೋಜನೆ ರೂಪಿಸುವಂತೆ ಮನವಿ ಮಾಡಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.


ಬ್ಯಾಡಗಿ ತಾಲೂಕಿನ ಯುವ ರೈತರು ಕನ್ಯಾಭಾಗ್ಯ ಆರಂಭಿಸುವಂತೆ ಪತ್ರದ ಮೂಲಕ ಮನವಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. 5 ರಿಂದ 6 ಎಕರೆ ಜಮೀನು ಇದ್ದರು ಸಹಿತ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಕ ಎಂದ ಮಾತ್ರಕ್ಕೆ ಎಷ್ಟೋ ಜನ ಕನ್ಯೆಯನ್ನು ತೊರಿಸುತ್ತಿಲ್ಲ. 5 ಸಾವಿರ ಸಂಬಳ ಬರುವ ವ್ಯಕ್ತಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ.


ನಾವು ಕೂಡ ಉತ್ತಮ ಮಳೆ ಬಂದ್ರೆ ಲಕ್ಷಾಂತರ ರೂಪಾಯಿ ಗಳಿಸ್ತೀವಿ. ಆದರೆ ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸುತ್ತಿದ್ದೇವೆ. ಕೃಷಿ ಮಾಡುತ್ತಿರುವವನು ಕೂಡ ತನ್ನ ಮಗಳನ್ನು ಕೃಷಿಕನಿಗೆ ಕೊಡಲು ಹಿಂದೇಟು ಹಾಕುವ ಪರಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಯುವ ರೈತರನ್ನು ಮದುವೆ ಆದ ಯುವತಿಯರಿಗೆ ಕನಿಷ್ಠ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು ರೈತರನ್ನು ಮದುವೆ ಆದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಬೇಕು. ಮನೆಯೊಡತಿಗೆ 2 ಸಾವಿರ ಕೊಡುವ ಮಾದರಿಯಲ್ಲಿ ರೈತರನ್ನು ಮದುವೆ ಆದವರಿಗೂ ಹಣ ಕೊಡಬೇಕು. ಇಂತಹ ಕಾರ್ಯಕ್ರಮಗಳನ್ನೊಳಗೊಂಡ ಕನ್ಯಾಭಾಗ್ಯ ಯೋಜನೆ ಜಾರಿಗೆ ತರಬೇಕೆಂದು ಪತ್ರ ಮೂಲಕ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Join Whatsapp
Exit mobile version