Home ಟಾಪ್ ಸುದ್ದಿಗಳು ವಿದ್ಯುತ್  ತಗುಲಿ ಯುವ ವೈದ್ಯ ದಂಪತಿ ಮೃತ್ಯು

ವಿದ್ಯುತ್  ತಗುಲಿ ಯುವ ವೈದ್ಯ ದಂಪತಿ ಮೃತ್ಯು

ಹೈದರಾಬಾದ್: ವಿದ್ಯುತ್  ತಗುಲಿ ಯುವ ವೈದ್ಯ ದಂಪತಿ ಮೃತಪಟ್ಟ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಸೂರ್ಯಪೇಟ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಸಯ್ಯದ್ ನಿಸಾರುದ್ದೀನ್ (26), ಡೆಕ್ಕನ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಅವರ ಪತ್ನಿ ಉಮ್ಮೆ ಮೊಹಿಮೀನ್ ಸೈಮಾ (22) ಮೃತ ದುರ್ದೈವಿಗಳಾಗಿದ್ದಾರೆ.

ದಂಪತಿಗಳು ಕಳೆದ ಆಗಸ್ಟ್ 20ರಂದು  ವಿವಾಹವಾಗಿದ್ದು, ಖಾದರ್ ಬಾಗ್ ಪ್ರದೇಶದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ನಾನದ ಕೊಠಡಿಯ ಗೀಸರ್ನಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಒಬ್ಬರಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಮತ್ತೊಬ್ಬರು ರಕ್ಷಿಸಲು ಯತ್ನಿಸಿದಾಗ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Join Whatsapp
Exit mobile version