Home ಟಾಪ್ ಸುದ್ದಿಗಳು ಮಂಗಳೂರು: ಲಾಡ್ಜ್ ನಲ್ಲಿ ಸಿಕ್ಕಿ ಬಿದ್ದ ಯುವ ಜೋಡಿಗಳು | ಪೋಕ್ಸೋ ಕಾಯ್ದೆಯಡಿ ಓರ್ವ ಅರೆಸ್ಟ್

ಮಂಗಳೂರು: ಲಾಡ್ಜ್ ನಲ್ಲಿ ಸಿಕ್ಕಿ ಬಿದ್ದ ಯುವ ಜೋಡಿಗಳು | ಪೋಕ್ಸೋ ಕಾಯ್ದೆಯಡಿ ಓರ್ವ ಅರೆಸ್ಟ್

ಮಂಗಳೂರು : ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ವಸತಿ ಗೃಹದಲ್ಲಿ ಜೋಡಿಗಳು ಸಿಕ್ಕಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ನಗರದ ಖಾಸಗಿ ಹೋಟೆಲ್ ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಎರಡು ಪ್ರತ್ಯೇಕ ಜೋಡಿಗಳನ್ನು ವಶಕ್ಕೆ ಪಡೆದಿದ್ದರು. ಪೊಲೀಸರು ದಾಳಿ ನಡೆಸುವಾಗ ಯುವಕರು-ಯುವತಿಯರು ಪ್ರತ್ಯೇಕ ರೂಂನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂದರು ಪೊಲೀಸರು ಜೋಡಿಗಳನ್ನು ವಶಕ್ಕೆ ಪಡಿದು ವಿಚಾರಣೆ ನಡೆಸಿದಾಗ ಇವರಲ್ಲಿ ಓರ್ವ ಅಪ್ರಾಪ್ತೆಯಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ ಕೋವಿಡ್ ಕರ್ಫ್ಯೂ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲೂ ಬಂದರ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಪೋಕ್ಸೋ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.‌

Join Whatsapp
Exit mobile version