Home ಟಾಪ್ ಸುದ್ದಿಗಳು ಇನ್ಮುಂದೆ ಟ್ವೀಟ್ ನಲ್ಲೂ ಸಿಗಲಿದೆ ಎಡಿಟ್ ಆಪ್ಶನ್ !

ಇನ್ಮುಂದೆ ಟ್ವೀಟ್ ನಲ್ಲೂ ಸಿಗಲಿದೆ ಎಡಿಟ್ ಆಪ್ಶನ್ !

ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ 320 ಮಿಲಿಯನ್ ಅಧಿಕ ಜನರಿಂದ ಬಳಸಲ್ಪಡುವ ಮೈಕ್ರೋಬ್ಲಾಗಿಂಗ್ ವೇದಿಕೆಯಾದ ಟ್ವಿಟರ್ ಇನ್ಮುಂದೆ ತನ್ನ ಬಳಕೆದಾರರಿಗೆ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಎಡಿಟ್ ಮಾಡುವ ಅವಕಾಶ ನೀಡಲಿದೆ ಎಂದು ಹೇಳಿದೆ.

ಈ ಹಿಂದೆ ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ,ಯಾವುದೇ ಕಾರಣಕ್ಕೂ ಟ್ವಿಟರ್ ನಲ್ಲಿ ಎಡಿಟ್ ಆಪ್ಶನ್ ನೀಡಲಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಬಳಕೆದಾರರ ಬೇಡಿಕೆಯ ಮೇರೆಗೆ ಟ್ವಿಟರ್ ಬ್ಲೂ ಚಂದಾದಾರರಿಗೆ ಎಡಿಟ್ ಬಟನ್ ಲಭ್ಯವಾಗುವಂತೆ ಮಾಡುವ ಯೋಜನೆಯು ಈ ತಿಂಗಳೊಳಗೆ ಮಾಡಲಿದೆ ಎಂದು ಟ್ವಿಟರ್ ಕಂಪನಿಯು ತಿಳಿಸಿದೆ.

ಎಡಿಟ್ ಬಟನ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ಟಿಟರ್, ಇಲ್ಲಿಯವರೆಗೆ, ಒಮ್ಮೆ ಟ್ವೀಟ್ ಮಾಡಿದ ವಿಷಯವನ್ನು ಎಡಿಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಏನಾದರೂ ಬದಲಾವಣೆ ಇದ್ದರೆ ಅದನ್ನು ಮತ್ತೊಮ್ಮೆ ಟ್ವೀಟ್ ಮಾಡಬೇಕಾಗಿತ್ತು. ಆದರೆ ಇನ್ಮುಂದೆ ಎಡಿಟ್ ಬಟನ್ ನೀಡಲಾಗುವುದು.

https://twitter.com/Twitter/status/1565318587736285184

ಎಡಿಟ್ ಬಟನ್, ಟ್ವೀಟ್ ಪ್ರಕಟಿಸಿದ ನಂತರ 30 ನಿಮಿಷಗಳವರೆಗೆ ಅಸ್ತಿತ್ವದಲ್ಲಿರುವ ಟ್ವೀಟ್ ನಲ್ಲಿ ಬದಲಾವಣೆಗಳನ್ನು ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಪ್ರಕಟಿತ ಟ್ವೀಟ್ ಲೇಬಲ್, ಟೈಮ್ ಸ್ಟ್ಯಾಂಪ್ ಮತ್ತು ಟ್ವೀಟ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುವ ಐಕಾನ್ ಗಳಂತಹ ಗುರುತಿಸುವಿಕೆಗಳನ್ನು ಹೊಂದಿರುತ್ತದೆ. ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ಕ್ಲಿಕ್ ಮಾಡಲು ಮತ್ತು ಮೂಲ ವಿಷಯಕ್ಕೆ ಮಾಡಿದ ಎಲ್ಲಾ ಬದಲಾವಣೆಗಳನ್ನು ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

Join Whatsapp
Exit mobile version