Home ಟಾಪ್ ಸುದ್ದಿಗಳು ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದ ಬಗ್ಗೆ ವಿವಾದಾತ್ಮಕ ಟ್ವೀಟ್: ಬಂಧನಗೊಳಗಾದ ಯೂಟ್ಯೂಬರ್!

ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದ ಬಗ್ಗೆ ವಿವಾದಾತ್ಮಕ ಟ್ವೀಟ್: ಬಂಧನಗೊಳಗಾದ ಯೂಟ್ಯೂಬರ್!

ಮಧುರೈ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಸಾವನ್ನಪ್ಪಿದ ಕೂನೂರ್ ಹೆಲಿಕಾಪ್ಟರ್ ದುರಮತ ದೇಶವನ್ನೇ ಬೆಚ್ಚಿಬೀಳಿಸಿದೆ. ಇಂತಹ ಸಂದರ್ಭದಲ್ಲಿಯೂ ಸಂಕುಚಿತ ಮನಸ್ಥಿತಿಗಳು ಟ್ವೀಟ್, ಕಾಮೆಂಟ್ ಮೂಲಕ ತಮ್ಮನ್ನು ಅನಾವರಣಗೊಳಿಸಿದ್ದಾರೆ. ತಮಿಳು ನಾಡಿನ ಯೂಟ್ಯೂಬರ್ ಓರ್ವ ಹೆಲಿಕಾಪ್ಟರ್ ದುರಂತದ ಬಗ್ಗೆ ವಿವಾದಾತ್ಮಕ ಟ್ವೀಟ್‌ ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಯೂಟ್ಯೂಬರ್ ಮರಿದಾಸ್ ಅವರನ್ನು ತಮಿಳುನಾಡಿನ ಮಧುರೈನಲ್ಲಿ ಸೈಬರ್ ಕ್ರೈಂ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮರಿದಾಸ್, “ಡಿಎಂಕೆ ಆಡಳಿತದಲ್ಲಿ ತಮಿಳುನಾಡು ಕಾಶ್ಮೀರವಾಗಿ ಬದಲಾಗುತ್ತಿದೆಯೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದ, ಬುಧವಾರದ ಸೇನಾ ಹೆಲಿಕಾಪ್ಟರ್ ದುರಂತದ ಹಿಂದೆ ಕಾಣದ ಕೈಗಳಿವೆ ಎಂದು ತೋರುತ್ತಿದೆ. ದೇಶಕ್ಕೆ ನಿಷ್ಠೆ ಇಲ್ಲದ ಜನರು ಒಗ್ಗೂಡಿದಾಗ ಸಂಚು ರೂಪಿಸುವ ಸಾಧ್ಯತೆಗಳಿವೆ ಮತ್ತು ಪ್ರತ್ಯೇಕತಾವಾದಿ ಶಕ್ತಿಗಳನ್ನು ತಡೆಯಬೇಕು” ಎಂದು ಮರಿದಾಸ್ ಟ್ವೀಟ್ ಮಾಡಿದ್ದನು. ನಂತರ ಅದನ್ನು ಡಿಲೀಟ್ ಮಾಡಿದ್ದನು.

ವಿವಾದಾತ್ಮಕ ಟ್ವೀಟ್ ಬಳಿಕ ಮದುರೈ ಪೊಲೀಸರು ಕೆ ಪುದೂರಿನ ಸೂರ್ಯ ನಗರದಲ್ಲಿರುವ ಮರಿದಾಸ್ ಮನೆಗೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಬಿಜೆಪಿ ಸದಸ್ಯರು ಸ್ಥಳದಲ್ಲಿ ಜಮಾಯಿಸಿ, ಅವರನ್ನು ಬಂಧಿಸದಂತೆ ತಡೆಯೊಡ್ಡಿದ್ದಾರೆ. ಆದರೆ ಪೊಲೀಸರು ಬಂಧಿಸದೇ ಬಿಡಲಿಲ್ಲ. ಠಾಣೆ ಎದುರು ಕೂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳಾದ ಟಿ.ಕೆ.ರಾಜಶೇಖರನ್ ಮತ್ತು ತಂಗದುರೈ ಅವರು ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮರಿದಾಸ್ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಐಪಿಸಿ ಸೆಕ್ಷನ್ 153 (ಎ), 504, 505 (ii), 505 (i) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp
Exit mobile version