ಢಾಕಾ: ಬಾಂಗ್ಲಾ ದೇಶದಲ್ಲಿ ಎಲ್ಲಾ ಧರ್ಮದವರಿಗೂ ಸಮಾನ ಅವಕಾಶವಿದೆ. ನೀವು ಈ ದೇಶದ ಅಲ್ಪಸಂಖ್ಯಾತರೆಂದು ಕಲ್ಪಿಸಿಕೊಳ್ಳಬೇಡಿ. ಇಲ್ಲಿ ನನಗೆ ಇರುವ ಎಲ್ಲಾ ಹಕ್ಕುಗಳು ನಿಮಗೂ ಇದೆ ಎಂದು ಬಾಂಗ್ಲಾ ದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅಲ್ಲಿನ ಹಿಂದೂಗಳಿಗೆ ಧೈರ್ಯ ತುಂಬಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ದೇಶದ ಹಿಂದೂಗಳಿಗೆ ಶುಭಾಷಯ ಸಲ್ಲಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಹಕ್ಕುಗಳಿಲ್ಲವೆಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಯಾವುದೋ ಒಂದು ಧರ್ಮದ ಯಾವುದೋ ದುಷ್ಟಶಕ್ತಿಗಳಿಗೆ ಈ ದೇಶದ ಸೌಹಾರ್ದತೆ ಕೆಡಿಸಲು ಸಾಧ್ಯವಿಲ್ಲ ಎಂದರು. ನೀವೆಲ್ಲರೂ ಆತ್ಮ ವಿಶ್ವಾಸದಿಂದ ಮುಂದುವರಿದರೆ ದೇಶದ ಸೌಹಾರ್ದತೆ ಗಟ್ಟಿಯಾಗುತ್ತದೆ ಎಂದರು.
ಯಾವುದೇ ಧರ್ಮವನ್ನು ನಿಂದಿಸುವ ಅಥವಾ ಸಾಮರಸ್ಯ ಕೆಡಿಸುವ ಪ್ರಯತ್ನಗಳನ್ನು ಸರಕಾರ ತಡೆಯುತ್ತದೆ. ಮತ್ತು ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಭರವಸೆಯನ್ನು ನೀಡಿದ್ದಾರೆ.