Home ಟಾಪ್ ಸುದ್ದಿಗಳು ಇಬ್ಬರ ಜಗಳದಿಂದ ನೀವು ಲಾಭ ಪಡೆದಿರಿ: ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ

ಇಬ್ಬರ ಜಗಳದಿಂದ ನೀವು ಲಾಭ ಪಡೆದಿರಿ: ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ

ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಖರೀದಿಸಿರುವ ಭಾರತದ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಡೆಮೈಟ್ರೋ ಕುಲೇಬಾ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ನೈತಿಕವಾಗಿ ಸಮರ್ಪಕವಾದ ನಿರ್ಧಾರವಲ್ಲ ಎಂದು ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ .

ಯುದ್ಧದ ಪರಿಣಾಮದಿಂದ ಉಕ್ರೇನ್ ನಿವಾಸಿಗಳು ಬಿಕ್ಕಟ್ಟಿಗೆ ಸಿಲುಕಿದ್ದು, ಮತ್ತೊಂದೆಡೆ ಸಾವು, ನೋವು ಅನುಭವಿಸುತ್ತಿದ್ದಾರೆ. ಇಂತಹ ಅವಕಾಶವನ್ನು ಬಳಸಿಕೊಂಡು ಭಾರತ ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿದೆ ಎಂದು ಡೆಮೈಟ್ರೋ ಕುಲೇಬಾ ಹೇಳಿದ್ದಾರೆ.

ರಷ್ಯಾದಿಂದ ಭಾರತ ಅಗ್ಗದ ಬೆಲೆಗೆ ತೈಲವನ್ನು ಖರೀದಿಸುವ ನಿರ್ಧಾರವನ್ನು ಉಕ್ರೇನ್ ಜನ ಅನುಭವಿಸುತ್ತಿರುವ ನರಕಯಾತನೆಯ ಕನ್ನಡಿಯ ಮೂಲಕ ನೋಡಬೇಕಾಗಿದೆ ಎಂಬುದಾಗಿ ಕುಲೇಬಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version