Home ಟಾಪ್ ಸುದ್ದಿಗಳು ನಿಮಗೆ ಗಾಯಗಳೇನೂ ಆಗಿಲ್ಲ ತಾನೇ: ಬೈಕ್’ನಿಂದ ಬಿದ್ದ ಸವಾರನ ಮೇಲೆತ್ತಿ ಮಾನವೀಯತೆ ಮೆರೆದ ರಾಹುಲ್ ಗಾಂಧಿ

ನಿಮಗೆ ಗಾಯಗಳೇನೂ ಆಗಿಲ್ಲ ತಾನೇ: ಬೈಕ್’ನಿಂದ ಬಿದ್ದ ಸವಾರನ ಮೇಲೆತ್ತಿ ಮಾನವೀಯತೆ ಮೆರೆದ ರಾಹುಲ್ ಗಾಂಧಿ

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸಂಸತ್ ಗೆ ಬರುತ್ತಿದ್ದಾಗ, ರಸ್ತೆ ಮಧ್ಯೆ ಸ್ಕೂಟರ್ ನಿಂದ ಬಿದ್ದ ವ್ಯಕ್ತಿ ಬಳಿ ಬಂದು ನಿಮಗೆ ಗಾಯವಾಗಿಲ್ಲ ತಾನೇ? ಎಂದು ವಿಚಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿ ಕುಳಿತಿದ್ದ ಕಾರು ಮುಂದೆ ಸಾಗುತ್ತಿದೆ. ಆ ಹೊತ್ತಲ್ಲೇ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದಾರೆ. ಸ್ಕೂಟರ್ ಹಿಂದೆ ಕಾರೊಂದು ನಿಂತಿದ್ದು, ಇಬ್ಬರು ಚಾಲಕರು ಸ್ಥಳದಲ್ಲಿಯೇ ಇದ್ದರು.


ನಿಮಗೆ ಗಾಯಗಳೇನೂ ಆಗಿಲ್ಲ ತಾನೇ ಎಂದು ರಾಹುಲ್ ಗಾಂಧಿ ಸವಾರನ ಬಳಿ ಹೇಳುವುದನ್ನು ಕೇಳಬಹುದು. ಸ್ಕೂಟರ್ ಡ್ರೈವರ್ಗೆ ರಾಹುಲ್ ಅಂಗರಕ್ಷಕರು ನೆಲದ ಮೇಲೆ ಬಿದ್ದ ವಸ್ತುಗಳನ್ನು ಎತ್ತಿ ಕೊಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

Join Whatsapp
Exit mobile version