Home ಟಾಪ್ ಸುದ್ದಿಗಳು ಭಾರತದ ಪರಂಪರೆಗೆ ದೊಡ್ಡ ಅಪಾಯ ಜಾತ್ಯತೀತತೆಯಾಗಿದೆ : ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ

ಭಾರತದ ಪರಂಪರೆಗೆ ದೊಡ್ಡ ಅಪಾಯ ಜಾತ್ಯತೀತತೆಯಾಗಿದೆ : ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ

ಜಾತ್ಯತೀತತೆಯು ಜಾಗತಿಕವಾಗಿ ಭಾರತದ ಪರಂಪರೆಗೆ ದೊಡ್ಡ ಅಪಾಯವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನಾವು ಸ್ವಚ್ಛ , ನೈತಿಕ ಮತ್ತು ಆರೋಗ್ಯಕರ ಜೀವನವನ್ನು ನಡೆಸಬೇಕು. ತಮ್ಮ ಸ್ವಂತ ಲಾಭಕ್ಕಾಗಿ ಜನರ ನಡುವೆ ತಪ್ಪು ಕಲ್ಪನೆಗಳನ್ನು ಹರಡಿ ದೇಶಕ್ಕೆ ದ್ರೋಹ ಬಗೆಯುವವರನ್ನು ನಾನು ಸುಮ್ಮನೆ ಬಿಡುವುದಿಲ್ಲ,  ಜಾಗತಿಕವಾಗಿ ಭಾರತೀಯ ಪರಂಪರೆಗೆ ದೊಡ್ಡ ಅಪಾಯ ಜಾತ್ಯಾತೀತತೆಯಾಗಿದೆ ಎಂದು ಯೋಗಿ ಹೇಳಿದ್ದಾರೆ.  ಅವರು ರಾಮಾಯಣದ ಗ್ಲೋಬಲ್ ಎನ್ಸೈಕ್ಲೋಪೀಡಿಯಾದ ಮೊದಲ ಆವೃತ್ತಿಯನ್ನು ಪ್ರಕಟಿಸಿ ಮಾತನಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ವಿವಾದಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ ಏಕತೆಯನ್ನು ಮುರಿಯಬೇಡಿ. ಅಲ್ಪ ಆರ್ಥಿಕ ಲಾಭಕ್ಕಾಗಿ ಭಾರತದ ಬಗ್ಗೆ ಸುಳ್ಳು ಪ್ರಚಾರ ಮಾಡುವ ಜನರು ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ರಾಮಾಯಣದಲ್ಲಿ ಬರುವ ಪಾತ್ರಗಳು ಮತ್ತು ಸ್ಥಳಗಳು ನಿಜವೆಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಮನು ಅಯೋಧ್ಯೆಯಲ್ಲಿ ಇದ್ದನೋ ಎಂದು ಕೆಲವರು ಇನ್ನೂ ಅನುಮಾನಿಸುತ್ತಾರೆ. ಐತಿಹಾಸಿಕ ಸತ್ಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಕೇವಲ ಸಂಕಲ್ಪವಲ್ಲ. ಪುಷ್ಪಕ ವಿಮಾನದಲ್ಲಿ ರಾಮನು ಶ್ರೀಲಂಕಾದಿಂದ ಬಂದಿದ್ದನು. ಆ ಸಮಯದಲ್ಲಿ ವಿಮಾನಗಳು ಇದ್ದವು. ಅಂದಿನ ವಿಜ್ಞಾನದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. 1947 ಕ್ಕಿಂತ ಮೊದಲು ಪಾಕಿಸ್ತಾನವು ಭಾರತದ ಭಾಗವಾಗಿತ್ತು. ಮರ್ಯಾದಾ ಪುರುಷನಾಗಿದ್ದ ಶ್ರೀ ರಾಮನು  ದೇಶದ ಗಡಿಗಳನ್ನು ವಿಸ್ತರಿಸಿದ್ದಾನೆ ಎಂದು ಯೋಗಿ ಹೇಳಿದ್ದಾರೆ.

Join Whatsapp
Exit mobile version