ಕಾಂಗ್ರೆಸ್ ಭಯೋತ್ಪಾದನೆಯ ತಾಯಿ: ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ

Prasthutha|

ಮಥುರಾ: ಭಾರತದಲ್ಲಿ ಕಾಂಗ್ರೆಸ್ ಭಯೋತ್ಪಾದನೆಯ ತಾಯಿಯ ಪಾತ್ರವನ್ನು ನಿಭಾಯಿಸುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕುಶಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಾಫಿಯಾಗಳಿಗೆ ಕಾಂಗ್ರೆಸ್ ಆಶ್ರಯ ನೀಡುತ್ತಿದೆ ಮತ್ತು ರಾಮನ ಮೇಲಿನ ನಂಬಿಕೆಯನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದರು.

- Advertisement -

ಮುಂದಿನ ವರ್ಷ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ.

ರಾಜ್ಯವನ್ನಾಳಿದ ಪಕ್ಷಗಳು 2017 ಕ್ಕಿಂತ ಮೊದಲು ಅಲ್ಪಸಂಖ್ಯಾತರಿಗೆ ಮಾತ್ರ ಪಡಿತರ ವ್ಯವಸ್ಥೆಗೊಳಿಸಿತ್ತು. ಅಬ್ಬಾ ಜಾನ್ ಎಂದು ಉದ್ಗರಿಸಿ ಬಡವರಿಗೆ ಸಿಗಬೇಕಾಗಿದ್ದ ಪಡಿತರ ಆಹಾರ ಮಾಫಿಯಾದ ಕೈಗಳಿಗೆ ನೀಡಿ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿತ್ತು. ಆದರೆ ಪ್ರಸಕ್ತ ಬಿಜೆಪಿ ಸರ್ಕಾರ ಮಾಫಿಯಾಕ್ಕೆ ಕಡಿವಾಣ ಹಾಕಿದೆ ಎಂದು ಯೋಗಿ ತಿಳಿಸಿದರು.

- Advertisement -