ಬೆಂಗಳೂರು: ಈ ದೇಶದ ಭದ್ರ ಬುನಾದಿಯೇ ಹಿಂದೂ ಧರ್ಮ, ಭಾರತ ಸೃಷ್ಟಿಯಾಗಿರುವುದೇ ಹಿಂದೂ ಧರ್ಮದ ಆಧಾರದಲ್ಲಿ ಎಂಬ ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಯತೀಂದ್ರ “ ಹೌದು ಇದು ಭಾರತ, ಪಾಕಿಸ್ತಾನವಲ್ಲ. ಪಾಕಿಸ್ತಾನದಂತೆ ನಮ್ಮದು ಧರ್ಮಾಧಾರಿತ ದೇಶವಲ್ಲ. ಎಲ್ಲ ಧರ್ಮ, ಜಾತಿ, ಜನಾಂಗ, ಲಿಂಗ, ಭಾಷೆ, ಸಂಸ್ಕೃತಿಯವರಿಗೂ ಸಮಾನ ಹಕ್ಕು ಹಾಗು ಸ್ವಾತಂತ್ರ್ಯ ನೀಡುವ ಉನ್ನತ ಆಶಯದೊಂದಿಗೆ ನಿರ್ಮಾಣಗೊಂಡ ರಾಷ್ಟ್ರ ನಮ್ಮದು. ಮಾಧ್ಯಮಗಳೂ ನಮ್ಮ ದೇಶವನ್ನು ಧರ್ಮಾಧಾರಿತ ದೇಶವನ್ನಾಗಿ ಮಾಡಲು ನಿಂತು ಬಿಟ್ಟರೆ ಹೇಗೆ? ಎಂದು ತಿರುಗೇಟು ನೀಡಿದ್ದಾರೆ.
ಹಲವು ನೆಟ್ಟಿಗರು ಕೂಡ ರಂಗನಾಥ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.