ಒಳಮೀಸಲಾತಿ ವರದಿ ಅಂಗೀಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ: ಯಡಿಯೂರಪ್ಪ ಮನೆ, ಕಚೇರಿ ಮೇಲೆ ಕಲ್ಲು ತೂರಾಟ

Prasthutha|

►ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ, ನಿಷೇಧಾಜ್ಞೆ ಜಾರಿ

- Advertisement -


ಶಿವಮೊಗ್ಗ: ಒಳಮೀಸಲಾತಿ ವರದಿ ಅಂಗೀಕಾರ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.


ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆ ಮತ್ತು ಕಚೇರಿ ಮೇಲೆ ಕಲ್ಲು.ಚಪ್ಲಲಿ ತೂರಿದ್ದಾರೆ.

- Advertisement -


ನಡೆಸುತ್ತಿದ್ದ ಬಂಜಾರ ಸಮುದಾಯದ ನೂರಾರು ಜನರು ಶಿಕಾರಿಪುರ ಪಟ್ಟಣದಲ್ಲಿನ ಯಡಿಯೂರಪ್ಪ ಅವರ ಮನೆ ಕಡೆಗೆ ಬ್ಯಾರಕೇಡ್ ಮುರಿದು ನುಗ್ಗಿದ್ದು ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಿದ್ದರೆ ಕೆಲವು ಯುವಕರು ಕಚೇರಿ ಚಾವಣಿ ಏರಿ ಬಿಜೆಪಿ ಬಾವುಟವನ್ನು ಕಿತ್ತುಹಾಕಿದರು. ಮೋದಿ ಚಿತ್ರವಿದ್ದ ಫ್ಲಕ್ಸ್ ಗಳನ್ನು ಹರಿದು ಹಾಕಿದರು.


ಯಡಿಯೂರಪ್ಪ ನವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಲಾಗಿದ್ದ ಸೀರೆಗಳನ್ನು ತಂದ ಯಡಿಯೂರಪ್ಪ ಅವರ ಮುಂದೆ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು ಕಲ್ಲು ತೂರಾಟದಲ್ಲಿ ಸಣ್ಣಪುಟ್ಟ ಗಾಯಗಳೂ ಆಗಿವೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ.



Join Whatsapp