ಗೋಮೂತ್ರ ಸಿಂಪಡಿಸಿದರೂ ಯಡಿಯೂರಪ್ಪ ಕಳಂಕ ಮುಕ್ತರಾಗುವುದಿಲ್ಲ: ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು: ಇನ್ನು ಗೋಮೂತ್ರ ಸಿಂಪಡಿಸಿದರೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಕಳಂಕಮುಕ್ತರಾಗುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕಾಲೆಳೆದಿದೆ.

- Advertisement -

ರಾಜ್ಯ ರಾಜಕಾರಣದಲ್ಲಿ ಸದ್ಯ ಉಂಟಾಗಿರುವ ಭಿನ್ನಮತ ಸ್ಪೋಟಕ್ಕೆ ಸಂಬಂಧಿಸಿ ಟ್ವಿಟ್ಟರಿನಲ್ಲಿ ರಾಜಕೀಯ ಪಕ್ಷಗಳ ಟ್ವೀಟ್ ಸಮರ ನಡೆಯುತ್ತಿದೆ.

ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು,  ದೇವನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ದೇವರಬೀಸನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ಆಪರೇಷನ್ ಕಮಲದಲ್ಲಿ ಹಣ ಆಮಿಷದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಆರೋಪಗಳನ್ನು ಮಾಡಿರುವ ಕಾಂಗ್ರೆಸ್, ಕಳಂಕಿತರಾಗಿ ಅಧಿಕಾರ ನಡೆಸಲು ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

‘ಯಡಿಯೂರಪ್ಪ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ’ ಎಂದು ಹೇಳಿದೆ. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ, ಯತ್ನಾಳ್ ಹಾಗೂ ವಿಜಯೇಂದ್ರ ಹೀಗೆ ಬಿಜೆಪಿ ಆಂತರಿಕ ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ. ಯತ್ನಾಳ್ ಅವರ ಆರೋಪಗಳನ್ನು ಸಚಿವ ಕೆ.ಎಸ್. ಈಶ್ವರಪ್ಪ ಅನುಮೋದಿಸುತ್ತಿದ್ದಾರೆ. ನಿಮಗೆ ಅಧಿಕಾರ ಸಿಕ್ಕಿದ್ದು, ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಯಡಿಯೂರಪ್ಪ ವಿರುದ್ಧ ತೀವ್ರ ದಾಳಿ ನಡೆಸಿದೆ.

ಆಪರೇಷನ್ ಕಮಲಕ್ಕಾಗಿ ಆಮಿಷವೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ತನಿಖೆಯ ಕಂಟಕ ಎದುರಾಗಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿರುವ ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ.

ಎಫ್‌ಐಆರ್ ರದ್ದುಕೋರಿ ಯಡಿಯೂರಪ್ಪ ಈ ಹಿಂದೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಎಫ್‌ಐಆರ್‌ಗೆ ತಡೆ ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ, ಇದೀಗ ತಡೆಯಾಜ್ಞೆ ತೆರವುಗೊಳಿಸಿ ಯಡಿಯೂರಪ್ಪ ವಿರುದ್ಧ ತನಿಖೆಗೆ ಆದೇಶಿಸಿದೆ.

Join Whatsapp