Home ಟಾಪ್ ಸುದ್ದಿಗಳು ಯತ್ನಾಳ್ ಒಬ್ಬ ಹುಚ್ಚುನಾಯಿ: ರೇಣುಕಾಚಾರ್ಯ ಕೆಂಡ

ಯತ್ನಾಳ್ ಒಬ್ಬ ಹುಚ್ಚುನಾಯಿ: ರೇಣುಕಾಚಾರ್ಯ ಕೆಂಡ

ದಾವಣಗೆರೆ: ಬಿಜೆಪಿ ಆಂತರಿಕ ಕಲಹ ಮತ್ತಷ್ಟು ಕಾವೇರಿದೆ‌. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕೆಂಡವಾಗಿದ್ದಾರೆ. ಯತ್ನಾಳ್ ಒಬ್ಬ ಹುಚ್ಚುನಾಯಿ ಎಂದು ವಿಶೇಷಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್ ಬಗ್ಗೆ ಮಾತನಾಡಲು ಅಸಹ್ಯ, ನಾಚಿಕೆಯಾಗುತ್ತದೆ. ಅಸಂಬದ್ಧ, ಅಶ್ಲೀಲ ಪದ ಬಳಕೆ ಮಾಡುವುದು ಅವರ ವೃತ್ತಿ. ಹುಚ್ಚುನಾಯಿ ರೀತಿ ವರ್ತನೆ ಮಾಡುತ್ತಿದ್ದಾರೆ. ನಾಯಿ ಮೊದಲು ಮನೆಯಲ್ಲಿರುತ್ತೆ. ಹುಚ್ಚು ಹಿಡಿದಾಗ ಬೀದಿಗೆ ಬಂದು ಬೊಗಳುತ್ತೆ. ಹುಚ್ಚುನಾಯಿ ಬೊಗಳಿದರೆ ಆನೆ ತೂಕ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ನಾಯಿ ಬೊಗಳಿದರೆ ಸ್ವರ್ಗಲೋಕ ಹಾಳಾಗುವುದಿಲ್ಲ. ನನ್ನ ವಿರುದ್ಧ ಟೀಕೆ ಮಾಡಲು ನಾಯಿ ಹಾಗೂ ಹಂದಿಗಳನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಿಟ್ಟಿದ್ದಾರೆ ಎಂದು ಹೇಳಿರುವ ಯತ್ನಾಳ್ ಒಬ್ಬ ಹುಚ್ಚುನಾಯಿ. ನಾಯಿಗೆ ಇರುವ ನಿಯತ್ತು ಈ ಮನುಷ್ಯನಿಗಿಲ್ಲ. ಜೆಡಿಎಸ್‌ನಿಂದ ಬಿಜೆಪಿಗೆ ಕರೆದುಕೊಂಡು ಬಂದದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಕೇಂದ್ರ ಸಚಿವರನ್ನಾಗಿ ಮಾಡಿದ್ದು ಕೂಡ ಅವರೇ. ಆದ್ರೆ, ಯತ್ನಾಳ್‌ಗೆ ನಿಯತ್ತು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ, ಅಭಿವೃದ್ದಿ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ಮಾಡಲಿಲ್ಲ. ಮೆದುಳಿಗೂ ಹಾಗೂ ನಾಲಗೆಗೂ ಲಿಂಕ್ ಇಲ್ಲದಂತೆ ಮಾತನಾಡುತ್ತಿದ್ದಾರೆ. ವಿಜಯೇಂದ್ರರ ವಿರುದ್ಧ ಮಾತನಾಡಿದ್ದು ಬಿಟ್ಟರೆ ಬೇರೆ ಏನು ಮಾಡಲಿಲ್ಲ. ಇಷ್ಟು ದಿನ ಗೌರವ ಇತ್ತು. ಇನ್ಮುಂದೆ ಗೌರವ ಕೊಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದು ಯಡಿಯೂರಪ್ಪ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂತೋಷ್ ಜಿ ಅವರು. ವಿಜಯೇಂದ್ರರನ್ನು ಆಯ್ಕೆ ಮಾಡಿದವರನ್ನು ಟೀಕಿಸಿದರೆ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡಿದಂತೆ ಎಂದು ಗುಡುಗಿದರು.

ಯಡಿಯೂರಪ್ಪ ಅವರನ್ನು ಆನೆಗೆ ಹೋಲಿಸಿದ ರೇಣುಕಾಚಾರ್ಯ, ನಾಯಿ ಬೊಗಳಿದರೆ ಆನೆ ಹೆದರುವುದಿಲ್ಲ ಎಂದರು. ಯಡಿಯೂರಪ್ಪ ನಡೆದುಕೊಂಡು ಹೋದರೆ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅಲ್ಲಿನ ಮಣ್ಣು ತೆಗೆದುಕೊಂಡು ಹಣೆಗೆ ಹಚ್ಚಿಕೊಳ್ಳುತ್ತಿದ್ದರು. ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದಾರೆ. ಪಾದಯಾತ್ರೆ, ಹೋರಾಟದ ಮೂಲಕ ಪಕ್ಷ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ ಎಂದರು.

ಇನ್ನು ಪಕ್ಷಕ್ಕೆ ಯತ್ನಾಳ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಹುಚ್ಚುನಾಯಿ ಬೊಗಳಿದ ಹಾಗೆ ಬೊಗಳುತ್ತೀಯಾ. ಹುಚ್ಚುನಾಯಿ ಬೊಗಳಿದರೆ ದೇವಲೋಕ ಹಾಳಾಗದು. ಇನ್ಮುಂದೆ ಮಾತನಾಡಿದರೆ ಸಹಿಸಲ್ಲ. ಗೌರವ ಕೊಡಲ್ಲ. ನಾಯಿಗೆ ಇರುವ ನಿಯತ್ತು ಐತಾ? ನಾವು ನಾಯಿ ಮರಿಗಳೇ. ನಮ್ಮನ್ನು ಬೊಗಳಲು ಬಿಟ್ಟಿಲ್ಲ. ಪಕ್ಷ ಸಂಘಟನೆಗೆ ಬಿಟ್ಟಿದ್ದಾರೆ ಎಂದು ಹೇಳಿದರು.

Join Whatsapp
Exit mobile version