ವಿಜಯಪುರ: ಅಫ್ಘಾನಿಸ್ತಾನದ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಅವರು ತಾಲಿಬಾನಿ ಸಂತಾನ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಫ್ಘಾನಿಸ್ತಾನದಿಂದ ಬರುವ ಹಿಂದೂ, ಸಿಖ್, ಬುದ್ಧ ಮತ್ತು ಜೈನರನ್ನು ಬಿಟ್ಟರೆ ಉಳಿದ ಧರ್ಮದವರಿಗೆ ಭಾರತಕ್ಕೆ ಪ್ರವೇಶ ಕೊಡಬಾರದು. ಒಂದು ವೇಳೆ ಬರುವುದಾದರೆ ಹಿಂದೂ, ಬೌದ್ಧ, ಜೈನ ಧರ್ಮಕ್ಕೆ ಮತಾಂತರಗೊಂಡ ಬಳಿಕ ಇಲ್ಲಿಗೆ ಬರಲು ಒಪ್ಪಿಗೆ ಸೂಚಿಸಬೇಕು’ ಎಂದು ಹೇಳಿದರು.
‘ಪ್ರಧಾನಿ ಮೋದಿಯಿಂದಾಗಿ ಹಿಂದೂ ಧರ್ಮ, ದೇಶ ಸುರಕ್ಷಿತವಾಗಿದೆ. ಮೋದಿ ಪ್ರಧಾನಿಯಾಗಿರದೆ ಇದ್ದಿದ್ದರೆ ಅವರೆಲ್ಲರೂ ತಾಲಿಬಾನಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು’. ದೇಶದ ಒಳಗಡೆ ಇರುವ ತಾಲಿಬಾನಿಗಳಿಗೆ ಗುಂಡು ಹಾಕಬೇಕಿದೆ. ತಾಲಿಬಾನಿಗಳು ಅಲ್ಲಿ ಗುಂಡು ಹಾಕುವ ಹಾಗೆ ಇಲ್ಲಿ ಇವರಿಗೆ ಗುಂಡು ಹಾಕಬೇಕು. ಗುಂಡು ಹಾಕದಿದ್ದರೆ ಇವರು ದೇಶಕ್ಕೆ ಪಿಡುಗು ಆಗುತ್ತಾರೆ’ ಎಂದು ಹೇಳಿದರು.
‘ಪಠಾಣರು ಕಳ್ಳ ನನ್ ಮಕ್ಕಳು. ಶೂರರು ವೀರರು ಎಂದು ಹೇಳಿಕೊಳ್ಳುತ್ತಿದ್ದ ಪಠಾಣರು ಹೆಂಡರನ್ನು ಬಿಟ್ಟು ಓಡಿ ಬರುತ್ತಿದ್ದಾರೆ, ಬಾಲಿವುಡ್ನ ಖಾನ್‌ಗಳು ಈಗ ಅಫ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಅಲ್ಲ ಎನ್ನುವ ಖಾನ್ ನಟರು ಅಫ್ಘಾನಿಸ್ತಾನಕ್ಕೆ ಹೋಗಿ ಜೀವನ ಮಾಡಲಿ’ ಎಂದು ವಾಗ್ದಾಳಿ ನಡೆಸಿದರು.