Home ಟಾಪ್ ಸುದ್ದಿಗಳು ಯತೀಂದ್ರ ವೀಡಿಯೋ: ಬಿಜೆಪಿಯಿಂದ ಪೋಸ್ಟರ್ ಬಿಡುಗಡೆ

ಯತೀಂದ್ರ ವೀಡಿಯೋ: ಬಿಜೆಪಿಯಿಂದ ಪೋಸ್ಟರ್ ಬಿಡುಗಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಯತೀಂದ್ರ ವಿಡಿಯೋ ವಿಚಾರ ವಿಪಕ್ಷಗಳಿಗೆ ದೊಡ್ಡ ಆಹಾರವಾಗುತ್ತಿದೆ. ಮಾಜಿ ಸಚಿವ ಅಶೋಕ್ ಟೀಕೆ ಮಾಡಿದ ಬೆನ್ನಿಗೆ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ.ಅದರಲ್ಲಿ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಬಿಂಬಿಸಿದ ಪೋಸ್ಟರ್‌ಗೆ ‘ಹೆಲೋ ಅಪ್ಪ’ ಎಂದು ಹೆಸರು‌ ನೀಡಿದೆ.

ಫೋಟೊ ಒಳಗೆ ಸಿಎಂ ಸಿದ್ದರಾಮಯ್ಯ ಲೆಟರ್ ಹೆಡ್ ಹಾಕಿ, ಸಿದ್ದರಾಮಯ್ಯ ಫೋಟೊವನ್ನು ಸಣ್ಣದಾಗಿ ಹಾಕಿ ಅವರ ನೆರಳನ್ನು ದೊಡ್ಡದು ಮಾಡಲಾಗಿದೆ. ಆ ನೆರಳಲ್ಲಿ ಯತೀಂದ್ರ ಮೂಡುವಂತೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿಡಿಯೋ ವೈರಲ್ ವ ವಿಚಾರ ವ್ಯಾಪಕ ಚರ್ಚೆಯಾಗುವಂತೆ ಮಾಜಿ ಸಿಎಂ ಕುಮಾರಸ್ವಾಮಿ ನೋಡಿಕೊಂಡದ್ದು, ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಇದಕ್ಕೀಗ ಬಿಜೆಪಿ‌ ಸಾತ್ ನೀಡಿದೆ.

Join Whatsapp
Exit mobile version