Home ಟಾಪ್ ಸುದ್ದಿಗಳು ಮೋದಿಗೆ 71ನೇ ಹುಟ್ಟುಹಬ್ಬ| #WorldFekuDay, ‘ರಾಷ್ಟ್ರೀಯ ನಿರುದ್ಯೋಗ ದಿನ’ ಹ್ಯಾಷ್ ಟ್ಯಾಗ್ ಟ್ರೆಂಡ್

ಮೋದಿಗೆ 71ನೇ ಹುಟ್ಟುಹಬ್ಬ| #WorldFekuDay, ‘ರಾಷ್ಟ್ರೀಯ ನಿರುದ್ಯೋಗ ದಿನ’ ಹ್ಯಾಷ್ ಟ್ಯಾಗ್ ಟ್ರೆಂಡ್

ಹೊಸದಿಲ್ಲಿ: ಎಪ್ಪತ್ತೊಂದನೇ ಹುಟ್ಟುಹಬ್ಬ ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದರೆ ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ  ‘ವಿಶ್ವ ಫೇಕು ದಿನ’ #WorldFekuDay, ‘ರಾಷ್ಟ್ರೀಯ ನಿರುದ್ಯೋಗ ದಿನ’  #NationalUnemploymentDay, ‘ಮೋದಿ ಕೆಲಸ ಕೊಡಿ’ #मोदीरोजगारदो, ಜುಮ್ಲಾ ದಿವಸ್ #JumlaDiwas ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿವೆ.

ದೇಶಾದ್ಯಂತ ಕಾಂಗ್ರೆಸ್ ಇಂದು ಮೋದಿ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸುತ್ತಿದೆ.

ಯೂತ್ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಅವರು ಟ್ವೀಟ್ ಮಾಡಿ, “ಮೋದಿಯವರ ಜನ್ಮದಿಕ್ಕೆ ಶುಭಕೋರಿದವರಿಗಿಂತ ನಾಲ್ಕು ಪಟ್ಟು ಹೆಚ್ಚು ನಿರುದ್ಯೋಗ ದಿನದ ಟ್ವೀಟ್ ಆಗಿದೆ. ಮೋದಿಯವರೇ ನೀವು ಇದನ್ನು ನೋಡುತ್ತಿದ್ದೀರಲ್ವಾ?” ಎಂದು ಕುಟುಕಿದ್ದಾರೆ.

ಅವರು ತಮ್ಮ ಮತ್ತೊಂದು ಟ್ವೀಟ್ನಲ್ಲಿ ನೀವು ಮೋದಿಯವರ ಜನ್ಮದಿನವನ್ನು ಆಚರಿಸುತ್ತಿದ್ದೀರಾ ಅಥವಾ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಈ ದೇಶದ ಯುವಕರೊಂದಿಗೆ ಆಚರಿಸುತ್ತಿರುವಿರಾ? ನಿರುದ್ಯೋಗ ಸಮಸ್ಯೆಯ ಕುರಿತು ಈಗಾಗಲೇ 1 ಮಿಲಿಯನ್ಗಿಂತಲೂ ಹೆಚ್ಚು ಟ್ವೀಟ್ಗಳು ಆಗಿದೆ. ಪತ್ರಿಕೋದ್ಯಮ ಜೀವಂತವಾಗಿದ್ದರೆ ವಾಸ್ತವಾಂಶಗಳನ್ನು ವರದಿ ಮಾಡಿ ಎಂದು ಹೇಳಿದ್ದಾರೆ.

ರೈತ ಹೋರಾಟದ ಟ್ವಿಟರ್ನ ಮುಖವಾದ ಕಿಸಾನ್ ಏಕ್ತಾ ಮೋರ್ಚಾ, “ಅನಿರೀಕ್ಷಿತವಾಗಿ, ಪ್ರಧಾನಿ ಮೋದಿಯವರ ಜನ್ಮವು ರಾಷ್ಟ್ರವನ್ನು ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹಾಳುಮಾಡಿದೆ. ಮೋದಿ ಸರ್ಕಾರ, ತನ್ನ ಜನರನ್ನು ಕೊಲ್ಲುವುದು, ಆಹಾರ ಉತ್ಪಾದಿಸುವವರನ್ನು ಅವಮಾನಿಸುವುದು, ಕೀಳುಮಟ್ಟದ ಮತ್ತು ಕ್ರೂರ ವಿಧಾನಗಳನ್ನು ಅಳವಡಿಸಿ ಸಾಮಾನ್ಯ ಮನುಷ್ಯನ ಹಕ್ಕುಗಳನ್ನು ದಮನಿಸುತ್ತಿದೆ. ನಾಚಿಕೆಗೇಡು, ಎಷ್ಟು ನಿರ್ದಯ ಪ್ರಧಾನಿ ಆಗಿರಬಹುದು ಅವರು. ಮೋದಿ ಹುಟ್ಟಿದ್ದೇ ಪ್ರಜಾಪ್ರಭುತ್ವವನ್ನು ನಾಶ ಮಾಡಲು” ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

Join Whatsapp
Exit mobile version