ವಿಶ್ವ ದಾಖಲೆ ಬರೆದ  ನಡೆದ ಭಾರತ- ಪಾಕ್ ಪಂದ್ಯ!  

Prasthutha|

ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಶನಿವಾರ ಅಹಮದಾಬಾದ್ ನಲ್ಲಿ ನಡೆದು ಭಾರತ ಆಲ್ ರೌಂಡ್ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಭಾರತ-ಪಾಕ್‌ ಪಂದ್ಯದಲ್ಲಿ ವಿಶೇಷ ಜಾಗತಿಕ ದಾಖಲೆಯೊಂದು ಸೃಷ್ಟಿಯಾಗಿದೆ.

ಡಿಜಿಟಲ್‌ ನೇರ ಪ್ರಸಾರದಲ್ಲಿ 3.5 ಕೋಟಿ ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಈ ಮೂಲಕ ವಿಶ್ವದಲ್ಲೇ ಗರಿಷ್ಠ ವೀಕ್ಷಣೆ ಡಿಸ್ನಿ ಹಾಟ್‌ ಸ್ಟಾರ್‌ ನಲ್ಲಿ ದಾಖಲಾಗಿದೆ.

ಇದಕ್ಕೂ ಮೊದಲು ದಾಖಲೆ ನಿರ್ಮಿಸಿದ್ದು ಐಪಿಎಲ್‌ ಪಂದ್ಯ. ಈ ವರ್ಷ ಚೆನ್ನೈ ಕಿಂಗ್ಸ್‌- ಗುಜರಾತ್‌ ಟೈಟಾನ್ಸ್‌ ನಡುವೆ ನಡೆದ 16ನೇ ಐಪಿಎಲ್‌ ಫೈನಲ್‌ನಲ್ಲಿ 3.2 ಕೋಟಿ ಮಂದಿ ಪಂದ್ಯ ನೋಡಿದ್ದರು.