Home ಟಾಪ್ ಸುದ್ದಿಗಳು ಜಗತ್ತು ನೋಡುತ್ತಿದೆ, ನೀವು ಇನ್ನೂ ಮೌನವಾಗಿದ್ದೀರಿ: ಪ್ರಧಾನಿಗೆ ಡ್ಯಾನಿಶ್ ಅಲಿ ಪತ್ರ

ಜಗತ್ತು ನೋಡುತ್ತಿದೆ, ನೀವು ಇನ್ನೂ ಮೌನವಾಗಿದ್ದೀರಿ: ಪ್ರಧಾನಿಗೆ ಡ್ಯಾನಿಶ್ ಅಲಿ ಪತ್ರ

ಹೊಸದಿಲ್ಲಿ: ಕಳೆದ ವಾರ ಸಂಸತ್ನಲ್ಲಿ ಬಿಜೆಪಿಯ ಸಂಸದ ರಮೇಶ್ ಬಿಧುರಿ ಅವರಿಂದ ಇಸ್ಲಾಮೋಫೋಬಿಕ್ ವಾಗ್ದಾಳಿಗೆ ಗುರಿಯಾಗಿರುವ ಬಹುಜನ ಸಮಾಜ ಪಕ್ಷದ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು “ಮೌನ ಮುರಿಯಿರಿ” ಮತ್ತು ಸಂಸತ್ ನ ನಿಯಮಗಳ ಪಾಲನೆ ಮತ್ತು ರಕ್ಷಣೆ ಕ್ರಮಕ್ಕೆ ಮುಂದಾಗುವಂತೆ ಹೇಳಿದ್ದಾರೆ.
ಅಲಿ ಪ್ರಧಾನಿ ವಿರುದ್ಧ ಜಾತಿವಾದಿ ಪದಗಳನ್ನು ಬಳಸಿದ್ದರಿಂದ ಬಿಧುರಿ ಅವರು ಕೋಮು ದೂಷಣೆಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಲಿ, “ನಿಮ್ಮನ್ನು (ಪ್ರಧಾನಿ) ಉಲ್ಲೇಖಿಸುವಾಗ ಅನುಚಿತ ಭಾಷೆ ಬಳಸಿದ್ದು ಬಿಜೆಪಿ ಸಂಸದರೇ, ನಾನು ಅಂತಹ ಭಾಷೆಯ ಬಳಕೆಯನ್ನು ಆಕ್ಷೇಪಿಸಿದ್ದೆ ಎಂದು ಹೇಳಿದ್ದಾರೆ.

ನಿಮ್ಮ ವಿರುದ್ಧ ಅಸಂಸದೀಯ ಭಾಷೆ ಬಳಸುವುದರ ವಿರುದ್ಧ ನನ್ನ ನಿಲುವಿಗೆ ಆಡಳಿತ ಪಕ್ಷದ ಯಾವೊಬ್ಬ ಸದಸ್ಯರು ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ಸದನದ ಕಲಾಪದಿಂದ ಸ್ಪಷ್ಟವಾಗಿದೆ. ಆದರೆ, ನಾನು ಎದ್ದುನಿಂತು ಬಿಧುರಿ ಅವರು ನಿಮ್ಮ ವಿರುದ್ಧ ಅಸಂಸದೀಯ ಭಾಷೆ ಬಳಸುತ್ತಿರುವುದನ್ನು ಸೂಚಿಸಿದಾಗ, ಅವರು ತಮ್ಮ ತಪ್ಪನ್ನು ಮರೆ ಮಾಚುವುದಕ್ಕಾಗಿ ನನ್ನ ಮೇಲೆ ತಿರುಗಿ ಬಿದ್ದರು ಎಂದು ಹೇಳಿದ್ದಾರೆ.

ಜಗತ್ತು ಭಾರತವನ್ನು ಹೆಚ್ಚು ನಿಕಟವಾಗಿ ಗಮನಿಸುತ್ತಿದೆ ಎಂದು ಅಲಿ ಪ್ರಧಾನಿ ಮೋದಿಯವರಿಗೆ ಹೇಳಿದ್ದಾರೆ. ಅಂದಹಾಗೆ ಈ ವಿಷಯದ ಬಗ್ಗೆ ಆಗಲೀ ಸದನದಲ್ಲಿ ಸದಸ್ಯರ ಶಿಸ್ತು ಬಗ್ಗೆಯಾಗಲೀ ಮೋದಿ ಮಾತನಾಡಿಲ್ಲ. “ಸಭಾನಾಯಕರಾಗಿ ಮತ್ತು ನಮ್ಮ ಮಹಾನ್ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ನಿಮ್ಮ ಸಾಮರ್ಥ್ಯದಲ್ಲಿ, ಸಂಸದರಾದ ರಮೇಶ್ ಬಿಧುರಿ ಅವರು ಅಸಂಸದೀಯ ಮತ್ತು ನಿಂದನೀಯ ಭಾಷೆಯನ್ನು ಆಶ್ರಯಿಸಿರುವ ಬಗ್ಗೆ ನೀವು ಗಂಭೀರ ಕಳವಳ ವ್ಯಕ್ತಪಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಅಲಿ.

ಮೂರು ಪುಟಗಳ ಪತ್ರದಲ್ಲಿ, ಅವರು ಅಂತಹ ನಡವಳಿಕೆಯನ್ನು ಖಂಡಿಸುವ ಹೇಳಿಕೆಯನ್ನು ನೀಡುವಂತೆ ಮತ್ತು ಎಲ್ಲಾ ಸದಸ್ಯರಿಗೆ ಮತ್ತು ನಡವಳಿಕೆಯ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಲು ನೆನಪಿಸುವಂತೆ ಪ್ರಧಾನಿಯನ್ನು ಕೇಳಿದರು. ಬಿಧುರಿ ಅವರನ್ನು ಅವರ ಖಂಡನೀಯ ನಡವಳಿಕೆಗಾಗಿ ಜವಾಬ್ದಾರರನ್ನಾಗಿ ಮಾಡಬೇಕು ಮತ್ತು ಅವರನ್ನು ಶಿಕ್ಷಿಸಬೇಕೆಂದು ಅಲಿ ಮನವಿ ಮಾಡಿದ್ದಾರೆ.

Join Whatsapp
Exit mobile version