ಕುಂದಾಪುರ | CFI ವತಿಯಿಂದ ವಿಶ್ವ ಪರಿಸರ ದಿನಾಚರಣೆ

Prasthutha|

 ಕುಂದಾಪುರ: ವಿಶ್ವ ಪರಿಸರ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸರ್ಕಾರಿ ಆಸ್ಪತ್ರೆ ಬಸ್ರೂರು ಮತ್ತು ಸರ್ಕಾರಿ ಉರ್ದು ಶಾಲೆ ಬಸ್ರೂರಿನಲ್ಲಿ ಸಸ್ಯಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದೆ. ಡಾ.ವಿದ್ಯಾ, ಆರೋಗ್ಯ ಅಧಿಕಾರಿ ಡಾ.ರಮೇಶ್ ಶೆಟ್ಟಿ ಮತ್ತು ಇತರ ಸಿಬ್ಬಂದಿಗಳು ಹಾಗೂ  SDMC ಅಧ್ಯಕ್ಷರಾದ  ಇಮ್ತಿಯಾಜ್  ಬಸ್ರೂರ್  ಉಪಸ್ಥಿತರಿದ್ದರು. ಹಾಗೆಯೇ ಗಂಗೊಳ್ಳಿ ಮತ್ತು ಶಿರೂರಿನಲ್ಲೂ CFI ಪರಿಸರ ದಿನವನ್ನು ಆಚರಿಸಿದೆ.

- Advertisement -

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ( CFI ) ಕುಂದಾಪುರ ಜಿಲ್ಲಾ ಸಮಿತಿ ಸದಸ್ಯ ಫಯೀಜ್ ಬಸ್ರೂರ್, ಸಹಾದ್ ಬಸ್ರೂರ್ ಮತ್ತು ಸದಸ್ಯರಾದ ಸಮೀರ್,ಅಫ್ನಾನ್ ಈ ಕ್ಷಣದಲ್ಲಿ ಉಪಸ್ಥಿತರಿದ್ದರು.

Join Whatsapp