Home ಟಾಪ್ ಸುದ್ದಿಗಳು ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

ನವದೆಹಲಿ: ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

70 ರ ದಶಕಗಳಲ್ಲಿ ವರಿಂದರ್ ಸಿಂಗ್ ಭಾರತೀಯ ಹಾಕಿಯ ಸ್ಮರಣೀಯ ವಿಜಯಗಳ ಭಾಗವಾಗಿದ್ದರು. 1972 ರಲ್ಲಿ ಮುನೀಚ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿ ಹಾಗೂ 1973 ರಲ್ಲಿ ಆಮ್ಸ್ಟ್ರಾಡಾಮ್ ನಲ್ಲಿ ನಡೆದ ವಿಶ್ವಕಪ್ ನ ಬೆಳ್ಳಿ ಪದಕ ಗೆದ್ದ ತಂಡ, 1974, 1978 ರ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ತಂಡಗಳಲ್ಲಿಯೂ ವರಿಂದರ್ ಸಿಂಗ್ ಇದ್ದರು. 

ಇವರಿಗೆ  2007 ರಲ್ಲಿ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವರಿಂದರ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಕಂಬನಿ ಮಿಡಿದಿದ್ದು, ಜಗತ್ತಿನಾದ್ಯಂತ ಇರುವ ಹಾಕಿ ಭ್ರಾತೃತ್ವ ವರಿಂದರ್ ಸಿಂಗ್ ಅವರನ್ನು ಸದಾ ನೆನಪಿನಲ್ಲಿಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp
Exit mobile version