ಅಹಮಾದಾಬಾದ್: ಅಹಮದಾಬಾದ್‌ನನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ನಿರೀಕ್ಷಿತ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ಭರ್ಜರಿ ಜಯ ದಾಖಲಿಸಿದೆ. ಭಾರತ 10 ವಿಕೆಟ್ ಕಳಕೊಂಡು ನೀಡಿದ 240 ರನ್‌ನ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಆಸ್ಟ್ರೇಲಿಯ ಕೇವಲ 4 ವಿಕೆಟ್ ನಷ್ಟಕ್ಕೆ ಮತ್ತು ಇನ್ನೂ 4 ಓವರ್ ಬಾಕಿ ಇರುವಾಗಲೇ ಪಂದ್ಯವನ್ನು ಜಯಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿದೆ.ಈ ಮೂಲಕ ಭಾರತ ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ದಾಖಲೆಯ 6ನೇ ಬಾರಿ ವಿಶ್ವಕಪ್‍ನ್ನು ಎತ್ತಿಹಿಡಿದಿದೆ
ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಅಮೋಘ ಶತಕ ಗಳಿಸಿದ್ದಾರೆ.
ಭಾರತದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದ್ದು, ಭಾರತದ ಅಭಿಮಾನಿಗಳಿಗೂ ತೀವ್ರ ನಿರಾಸೆಯಾಗಿದ್ದು, ಕ್ರೀಡಾಂಗಣ ಪೂರ್ತಿ ಮೌನವೇ ಆವರಿಸುತ್ತಿದೆ.
ಇದು ಭಾರತ ಎರಡನೇ ಬಾರಿ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯದ ಎದುರು ಸೋಲಿಗೆ ಶರಣಾಗಿರುವುದು.ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಮೋಘ ನಿರ್ವಹಣೆ ತೋರಿದ ಆಸೀಸ್ ಟಾಸ್ ಗೆದ್ದು ಭಾರತವನ್ನು 240 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆಗಲೇ ಭಾರತದ ಮೇಲಿನ ನಿರೀಕ್ಷೆಗೆ ಭಂಗವಾಗಲು ತೊಡಗಿತ್ತು.