Home ಟಾಪ್ ಸುದ್ದಿಗಳು ಕಾರ್ಮಿಕನ ಮೇಲೆ ನಾಲ್ವರು ಯುವತಿಯರಿಂದ ಅತ್ಯಾಚಾರ: ಸುಮೋಟೋ ಪ್ರಕರಣ ದಾಖಲು

ಕಾರ್ಮಿಕನ ಮೇಲೆ ನಾಲ್ವರು ಯುವತಿಯರಿಂದ ಅತ್ಯಾಚಾರ: ಸುಮೋಟೋ ಪ್ರಕರಣ ದಾಖಲು

ಚಂಢೀಗಡ:  ಕಾರ್ಮಿಕನ ಮೇಲೆ ನಾಲ್ವರು ಯುವತಿಯರು ಅತ್ಯಾಚಾರ ಎಸಗಿ ಪರಾರಿಯಾಗಿರೋ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸಂತ್ರಸ್ತ  ತಾನು ಚರ್ಮದ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದು,  ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಬಿಳಿ ಕಾರಿನಲ್ಲಿ ಬಂದ ನಾಲ್ವರು ಯುವತಿಯರು  ವಿಳಾಸ ಕೇಳುವ ನೆಪದಲ್ಲಿ ತನ್ನನು  ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ  ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಟ್ಟಿ, ತನಗೆ ಹೊಡೆದಿದ್ದಾರೆ. ಬಳಿಕ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು  ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ದೂರನ್ನು ನೀಡಿಲ್ಲ ಎನ್ನಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಬಳಿಕ ಪಂಜಾಬ್ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

Join Whatsapp
Exit mobile version