ಮಾಜಿ ಸಚಿವ ಈಶ್ವರಪ್ಪ ನಮ್ಮ ಪಕ್ಷಕ್ಕೆ ಬಂದರೂ ಅಚ್ಚರಿಯಿಲ್ಲ: ಎಂಬಿ ಪಾಟೀಲ್

Prasthutha|

ಬೆಂಗಳೂರು: ಲೋಕಸಭೆ ಚುನಾವಣೆವರೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ನಮ್ಮ ಪಕ್ಷಕ್ಕೆ ಬಂದರೂ ಅಚ್ಚರಿಯಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ನಮ್ಮ ಪಕ್ಷಕ್ಕೆ ಬಂದರೂ ಅಚ್ಚರಿಯಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ವಿಚಾರ ಮಾಡುತ್ತೇವೆ. ಈಶ್ವರಪ್ಪ ಬಹಳ ಮೇಧಾವಿಗಳು. ಅವರ ಹೇಳಿಕೆಗೆ ನಾನು ಉತ್ತರ ಕೊಡಲು ಬಯಸಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದರು.

ಗುತ್ತಿಗೆದಾರರ ನಿವಾಸದ ಮೇಲೆ ಐಟಿ ದಾಳಿ ಯಾವಾಗಲೂ ನಡೆಯುತ್ತೆ. ಬಿಜೆಪಿ ಅವಧಿಯಲ್ಲೂ ದಾಳಿಯಾಗಿತ್ತು, ಈಗಲೂ ಐಟಿ ದಾಳಿ ನಡೆಯುತ್ತಿದೆ. ಗುತ್ತಿಗೆದಾರರ ಮನೆ ಮೇಲಿನ ದಾಳಿಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಟೆಂಡರ್ ಗಳನ್ನು ಕರೆದಿಲ್ಲ. ಬಿಜೆಪಿಯವರ 40% ಕಮಿಷನ್ ಹಣ ಚುನಾವಣೆ ವೇಳೆ ಹೊರಬರುತ್ತಿದೆ. ಗುತ್ತಿಗೆದಾರರು ಎಲ್ಲಾ ಪಕ್ಷದವರು ಇರುತ್ತಾರೆ. ಯಾವ ಪಕ್ಷದ ಸರ್ಕಾರ ಇರುತ್ತೆ, ಆ ಕಡೆ ಗುತ್ತಿಗೆದಾರರು ಇರುತ್ತಾರೆ ಎಂದರು.