Home ಟಾಪ್ ಸುದ್ದಿಗಳು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ: ಅಖಿಲೇಶ್ ಯಾದವ್

ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ: ಅಖಿಲೇಶ್ ಯಾದವ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.


ಭಾರತ್ ಜೋಡೊ ಯಾತ್ರೆಗೆ ಎಸ್’ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಿಎಸ್’ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಕಾಂಗ್ರೆಸ್ ಆಹ್ವಾನ ನೀಡಿದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಆಹ್ವಾನ ಬಂದಿಲ್ಲ, ನಮ್ಮ ಸಿದ್ಧಾಂತ ವಿಭಿನ್ನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದರು.
ನನಗೆ ನೀಡಿದ ಆಹ್ವಾನ ಪತ್ರಿಕೆ ನಿಮ್ಮ ಮೊಬೈಲ್ ಫೋನ್’ನಲ್ಲಿ ಇದ್ದರೆ ದಯಮಾಡಿ ಕಳಿಸಿಕೊಡಿ. ನಮ್ಮ ಭಾವನೆಗಳು ಭಾರತ್ ಜೋಡೊ ಯಾತ್ರೆಯ ಜತೆಗಿವೆ. ನನಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಅವರು ನುಡಿದರು.


ಇನ್ನು ಕಾಂಗ್ರೆಸ್’ನ ಭಾರತ್ ಜೋಡೊ ಯಾತ್ರೆ ಜನವರಿ 3 ರಂದು ಉತ್ತರ ಪ್ರದೇಶವನ್ನು ಪ್ರವೇಶಿಸಲಿದ್ದು, ಈ ಪ್ರಯಾಣವು ಗಾಜಿಯಾಬಾದ್ ಲೋನಿಯಿಂದ ಪ್ರಾರಂಭವಾಗಿ ವಿವಿಧ ನಗರಗಳ ಮೂಲಕ ಹಾದು ಹೋಗಲಿದೆ.

Join Whatsapp
Exit mobile version