ಬಿಜೆಪಿಯು ಕೋಮುವಾದಿ ಪಕ್ಷ, ಅದರ ಜೊತೆಗೆ ಹೋಗುವ ಪ್ರಶ್ನೆಯೇ ಇಲ್ಲ: ಶಿಖಾ ಮಿತ್ರಾ

Prasthutha|

ಕೊಲ್ಕತ್ತಾ: ನಾನು ಭಿನ್ನಾಭಿಪ್ರಾಯದಿಂದ ತೃಣಮೂಲ ಕಾಂಗ್ರೆಸ್ ನಿಂದ ಸ್ವಲ್ಪ ದಿನ ದೂರವಿದ್ದೆ. ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ ಬಿಟ್ಟಿಲ್ಲ. ಇನ್ನು ಕೋಮುವಾದಿ ಪಕ್ಷವಾಗಿರುವ ಬಿಜೆಪಿಯ ಜೊತೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮಾಜಿ ಶಾಸಕಿ ಶಿಖಾ ಮಿತ್ರಾ ಸ್ಪಷ್ಟಪಡಿಸಿದ್ದಾರೆ.

- Advertisement -


ಸಮಾಜವನ್ನು ಒಡೆಯುವ ಕೆಲಸ ಮಾಡುವ ಬಿಜೆಪಿಗೆ ಧಿಕ್ಕಾರ ಎಂದು ಹೇಳಿರುವ ಶಿಖಾ, ಮಮತಾ ಬ್ಯಾನರ್ಜಿಯವರು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ಸಿನಿಂದ ಶಾಸಕಿಯಾಗಿದ್ದ ಶಿಖಾ ಅವರು ಅನಂತರ ಕೆಲ ಕಾಲ ತಟಸ್ಥರಾಗಿದ್ದರು.

Join Whatsapp