ನವದೆಹಲಿ ಆಗಸ್ಟ್ 2 : ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ಸೌಹಾರ್ದತೆಯುತವಾಗಿ ಬಗೆಹರಿಸುವಂತೆ ಸುಪ್ರೀಮ್ ಕೋರ್ಟ್ ಇಂದು ಹೇಳಿದೆ. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ಬಿ ರಮಣ ಅವರು ಈ ವಿವಾದದ ಬಗ್ಗೆ ಉಲ್ಲೇಖಿಸಿ ನಾನು ಎರಡೂ ರಾಜ್ಯಗಳಿಗೆ ಸೇರಿದವರು. ಆದ್ದರಿಂದ ಈ ವಿಷಯದಲ್ಲಿ ಕಾನೂನುಬದ್ಧವಾಗಿ ತೀರ್ಮಾನಿಸುವ ನಿಟ್ಟಿನಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲವೆಂದು ಹೇಳಿದರು.
ಮಾತ್ರವಲ್ಲದೇ ಎರಡೂ ರಾಜ್ಯಗಳ ಮಧ್ಯಸ್ಥಿಕೆಯಲ್ಲಿ ವಿಷಯವನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದರೆ ಉತ್ತಮ. ಇಲ್ಲದಿದ್ದರೆ ನಾನು ಈ ಪ್ರಕರಣವನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸುತ್ತೇನೆಂದು ಸಿಜೆಇ ಅವರು ಹೇಳಿದರು. ಆಂಧ್ರಪ್ರದೇಶದ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ವಾದಿಸಿದರು. ಅದೇ ರೀತಿ ತೆಲಂಗಾಣದ ಪರವಾಗಿ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ಅವರು ಹಾಜರಾದರು.
ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತೆಲಂಗಾಣ-ಆಂದ್ರಪ್ರದೇಶದ ವಿವಾದವನ್ನು ಆಂದ್ರಪ್ರದೇಶ ರಾಜ್ಯವು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯು ಸುಪ್ರೀಮ್ ಕೋರ್ಟ್ ನಲ್ಲಿ ವಿಚಾರಣೆಯಲ್ಲಿ ನಡೆಯುತ್ತಿದೆ.ಈ ಪ್ರಕರಣದ ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ