Home ಟಾಪ್ ಸುದ್ದಿಗಳು ಹೈಕೋರ್ಟ್ ಹಿಜಾಬ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ

ಹೈಕೋರ್ಟ್ ಹಿಜಾಬ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ

ನವದೆಹಲಿ: ಹಿಜಾಬ್ ಕುರಿತಂತೆ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಬೇಕು ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.

ಇದು ಹಿಜಾಬ್ ಧರಿಸುವ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯದಂತೆ ತಡೆಯುತ್ತದೆ ಎಂದು ಮಹಿಳಾ ಸಂಘಟನೆ ಹೇಳಿದೆ.

 “ರಾಜ್ಯ ಹೈಕೋರ್ಟ್ ತೀರ್ಪು ಕಾಲೇಜುಗಳ ಅಭಿವೃದ್ಧಿ ಸಮಿತಿಗಳು ಸಮವಸ್ತ್ರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಗುರುತಿಸುತ್ತದೆ. ಕರ್ನಾಟಕದಲ್ಲಿಯೇ, ಅನೇಕ ಕಾಲೇಜುಗಳು ಸಮವಸ್ತ್ರದ ಜೊತೆಗೆ ಹಿಜಾಬ್ ಗಳನ್ನು ಧರಿಸಬಹುದೆಂದು ಹೇಳಿವೆ. ಅಂತೆಯೇ ಸಿಖ್ ಹುಡುಗರು ಮತ್ತು ಪುರುಷರು ಪೇಟವನ್ನು ಧರಿಸುವಂತೆ, ಹಿಂದೂಗಳು ಬಿಂದಿ, ತಿಲಕ, ದಾರ, ಸಿಂಧೂರ ಇತ್ಯಾದಿಗಳನ್ನು ಧರಿಸುವಂತೆಯೇ ಹುಡುಗಿಯರು ಮತ್ತು ಮಹಿಳೆಯರಿಗೆ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು” ಎಂದು ಮಹಿಳಾ ಸಂಘಟನೆಗಳು ರಾಜ್ಯದ ಎಲ್ಲಾ ಕಾಲೇಜುಗಳ ಅಭಿವೃದ್ಧಿ ಸಮಿತಿಗಳಿಗೆ ಮನವಿ ಮಾಡಿವೆ.

ರಾಜ್ಯದ ಯಾವುದೇ ಕಾಲೇಜು ಈ ಹಿಂದೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ನಿಯಮವನ್ನು ಹೊಂದಿರಲಿಲ್ಲ ಎಂಬುದನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೆನಪಿಸಿರುವ ಮಹಿಳಾ ಸಂಘಟನೆಗಳು, “ವಾಸ್ತವವಾಗಿ ಒಂದು ಕಾಲೇಜಿನ ನಿಯಮ ಪುಸ್ತಕದಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದ ಬಣ್ಣಕ್ಕೆ ಅನುಗುಣವಾಗಿ ಹಿಜಾಬ್ ಅನ್ನು ಧರಿಸಬಹುದು ಎಂದು ನಿರ್ದಿಷ್ಟಪಡಿಸಿತ್ತು. ಆದ್ದರಿಂದ ಹಿಜಾಬ್ ಧರಿಸುವ ಹುಡಿಗಿಯರು ಸಮವಸ್ತ್ರವನ್ನು ಧಿಕ್ಕರಿಸಲಿಲ್ಲ” ಎಂದು ಮಹಿಳಾ ಸಂಘಟನೆಗಳು ಹೇಳಿವೆ.

Join Whatsapp
Exit mobile version