Home ಟಾಪ್ ಸುದ್ದಿಗಳು ಮಹಿಳಾ ಐಪಿಎಲ್ ಆರಂಭ: ಐದು ತಂಡಗಳ ಹರಾಜು

ಮಹಿಳಾ ಐಪಿಎಲ್ ಆರಂಭ: ಐದು ತಂಡಗಳ ಹರಾಜು

ಮುಂಬೈ: ಮಹಿಳೆಯರ ಐಪಿಎಲ್’ನ ಚೊಚ್ಚಲ ಆವೃತ್ತಿಯ ಐದು ತಂಡಗಳ ಮಾರಾಟದಿಂದ ಬಿಸಿಸಿಐ 4669.99 ಕೋಟಿ ಆದಾಯ ಗಳಿಸಿದೆ.


ಅಹಮದಾಬಾದ್, ಮುಂಬೈ, ದೆಹಲಿ, ಬೆಂಗಳೂರು ಹಾಗೂ ಲಕ್ನೋ ಸೇರಿದಂತೆ ಐದು ಫ್ರಾಂಚೈಸಿಗಳು ಚೊಚ್ಚಲ ಆವೃತ್ತಿಯಲ್ಲಿ ಕಣಕ್ಕಿಳಿಯಲಿವೆ.
ಅದಾನಿ ಸಮೂಹದ ಅದಾನಿ ಸ್ಫೋರ್ಟ್ ಲೈನ್ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿದ್ದು, 1,289 ಕೋಟಿ ನೀಡಿ ತಂಡವನ್ನು ಖರೀದಿಸಿದೆ.


ಅಹಮದಾಬಾದ್ ಫ್ರಾಂಚೈಸಿ ಅದಾನಿ ಸಮೂಹದ ಪಾಲಾಗಿದ್ದು, ಪುರುಷರ ಐಪಿಎಲ್ ‘ ಮುಂಬೈ ಇಂಡಿಯನ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಕ್ರಮವಾಗಿ 912.99 ಕೋಟಿ, 901 ಕೋಟಿ ಮತ್ತು 810 ಕೋಟಿ ರೂ. ನೀಡಿ ತಂಡಗಳನ್ನು ಖರೀದಿಸುವ ಮೂಲಕ ಡಬ್ಲ್ಯುಪಿಎಲ್’ಗೆ ಪ್ರವೇಶ ಪಡೆದಿದ್ದಾರೆ.
ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ 757 ಕೋಟಿ ರೂಗೆ ಲಖನೌ ಫ್ರಾಂಚೈಸಿ ಪಡೆದುಕೊಂಡಿದೆ.

Join Whatsapp
Exit mobile version