ದೇವೇಗೌಡರ ಭಾಷಣದ ವೇಳೆ ವೇದಿಕೆಗೆ ನುಗ್ಗಿದ ಮಹಿಳೆಯರು: ಎಚ್’ಡಿಕೆ ವಿರುದ್ಧ ಘೋಷಣೆ

Prasthutha|

ತುಮಕೂರು: ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಾತನಾಡುತ್ತಿದ್ದ ವೇಳೆ ವೇದಿಕೆಗೆ ನುಗ್ಗಿದ ಇಬ್ಬರು ಮಹಿಳೆಯರು ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ.

- Advertisement -


ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು.


ಬಿಜೆಪಿ ಮಹಿಳಾ ಕಾರ್ಯಕರ್ತರು ಅವರನ್ನು ಸಭಾಂಗಣದಿಂದ ಹೊರಕ್ಕೆ ಎಳೆದೊಯ್ದರು ಮತ್ತು ನಂತರ ಪೊಲೀಸರು ಅವರನ್ನು ದೂರ ಕಳುಹಿಸಿದರು. ಈ ಘಟನೆಯಿಂದ ತಬ್ಬಿಬ್ಬಾದ ದೇವೇಗೌಡರು ಕೆಲ ಕಾಲ ಭಾಷಣ ನಿಲ್ಲಿಸಿ ನಂತರ ಮಾತನಾಡಿದರು.



Join Whatsapp