Home ಕರಾವಳಿ ಮಲ್ಲೂರು | ಮನೆ ಮೇಲೆ ಗುಡ್ಡ ಕುಸಿದು ಮಹಿಳೆಗೆ ಗಾಯ

ಮಲ್ಲೂರು | ಮನೆ ಮೇಲೆ ಗುಡ್ಡ ಕುಸಿದು ಮಹಿಳೆಗೆ ಗಾಯ

ಮಂಗಳೂರು, ಜು.26: ನಗರದ ಹೊರವಲಯದ ಮಲ್ಲೂರಿನಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ವೃದ್ಧೆಯೊಬ್ಬರು ಗಾಯಗೊಂಡಿದ್ದಾರೆ.


ಮಲ್ಲೂರು ಜಂಕ್ಷನ್ ಬಳಿಯ ನಿವಾಸಿ ಬೀಫಾತುಮ್ಮ (72) ಗಾಯಗೊಂಡವರು. ಮಲ್ಲೂರು ಜಂಕ್ಷನ್ ಬಳಿಯ ಝುಬೇರ್ ಎಂಬವರ ಮನೆಯ ಹಿಂಭಾಗವಿದ್ದ ಗುಡ್ಡ ಸೋಮವಾರ ಮುಂಜಾನೆ ಏಕಾಏಕಿ ಕುಸಿದಿದೆ. ಇದರಿಂದ ಮನೆಯಲ್ಲಿದ್ದ ಬೀಫಾತುಮ್ಮ ಅವರಿಗೆ ತೀವ್ರ ಗಾಯವಾಗಿದೆ. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗುಡ್ಡ ಕುಸಿತದಿಂದ ಭಾಗಶಃ ಮನೆಗೆ ಹಾನಿಯಾಗಿದ್ದು, ಅಪಾರ ಹಾನಿ ಉಂಟಾಗಿದೆ.


ಘಟನಾ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಸದಸ್ಯ ಇಲ್ಯಾಸ್ ಪಾದೆ ಭೇಟಿ ನೀಡಿದ್ದು ಪರಿಹಾರದ ಭರವಸೆ ನೀಡಿದ್ದಾರೆ.

Join Whatsapp
Exit mobile version