ಸಾಮಾಜಿಕ ಹೋರಾಟಗಾರರನ್ನು ಬೇಷರತ್ ಬಿಡುಗಡೆಗೊಳಿಸಬೇಕು: ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯ

ಬೆಂಗಳೂರು: ಕರ್ನಾಟಕ ಹಾಗೂ ದೇಶದ ವಿವಿಧತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಚೇರಿ ಮತ್ತು ನಾಯಕರ ಮನೆಗಳಿಗೆ NIA ನಡೆಸಿದ ದಾಳಿ ಮತ್ತು ಬಂಧನವನ್ನು ವಿಮೆನ್ ಇಂಡಿಯ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ.

     ತೀರಾ ಸ್ಥಳೀಯ , ಐಪಿಸಿ ಕಲಂನಡಿಯಲ್ಲಿ ಬರುವ ಘಟನೆಗಳಿಗೆ NIAನ್ನು ದುರುಪಯೋಗಪಡಿಸುತ್ತಿರುವ ಕೇಂದ್ರ ಸರ್ಕಾರದ ಈ ನಡೆಯು ದ್ವೇಷಪೂರಿತ ಸೇಡಿನ ರಾಜಕೀಯವಾಗಿದೆ. ತನಿಖಾ ಏಜೆನ್ಸಿಗಳು ಕಾನೂನಾತ್ಮಕವಾಗಿ ನಡೆದುಕೊಳ್ಳದೆ ಸಿನಿಮೀಯ ರೀತಿಯಲ್ಲಿ ದಾಳಿಯನ್ನು ನಡೆಸಿದೆ.  ವಾರೆಂಟ್ ಇಲ್ಲದೆ, ಮಹಿಳಾ ಪೊಲೀಸರ ಅನುಪಸ್ಥಿತಿಯಲ್ಲಿ, ಬಾಗಿಲುಗಳನ್ನು ಮುರಿದು,  ಹೆದರಿಸಿ ಯಾವುದೇ ಕಳ್ಳರು ದರೋಡೆಕೋರರಿಗಿಂತ ನಾವು ಕಮ್ಮಿ ಇಲ್ಲ ಎಂಬಂತೆ ವರ್ತಿಸಿದ್ದಾರೆ.  ಸರಕಾರವು ಮಾಧ್ಯಮಗಳಲ್ಲಿ ಇಂತಹ ಒಂದು ದೃಶ್ಯಾವಳಿಯನ್ನು ಸೃಷ್ಟಿಸಿ ತನಿಖೆಗೆ ಸಹಕರಿಸದವರು ಎಂಬಂತೆ ಬಿಂಬಿಸಲು ಹೊರಟಿದೆ.

- Advertisement -

       ಮಹಿಳೆಯರದ್ದು ಒಳಗೊಂಡ ನಗ-ನಗದು ಕಳ್ಳತನ ವಾಗಿರುವುದು ಕೂಡ ವಗರದಿಯಾಗಿದೆ. ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಗಳನ್ನು ಹೊತ್ತೊಯ್ದ ಕಾರಣ ಶಿಕ್ಷಣಕ್ಕೆ ತಡೆಯಾಗಿದೆ.  ಹತ್ತಾರು ಪೊಲೀಸರೊಂದಿಗೆ ತಡರಾತ್ರಿ ಏಕಾಏಕಿ ದಾಳಿ ನಡೆಸಿ, ಬೆದರಿಸಿ , ಸಾಮಗ್ರಿಗಳನ್ನು ಚದುರಿಸಿ ನಡೆಸುವ ತನಿಖೆ ಯಿಂದಾಗಿ ಮಕ್ಕಳು ಮಹಿಳೆಯರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. 

      NIA ಯ ಅಕ್ರಮ ಬಂಧನವು  ಸಂಘಪರಿವಾರದ ಪ್ರೇರಿತವಾಗಿದ್ದು, ಸಾಮಾಜಿಕ ಹೋರಾಟಗಾರಾದ ಪಿಎಫ್ಐ ನಾಯಕರನ್ನು ಬೇಶರತ್ ತಕ್ಷಣ ಬಿಡುಗಡೆಗೊಳಿಗೆಸಬೇಕು ಹಾಗೂ ಇಂತಹ ದ್ವೇಷಪೂರಿತ ಅಕ್ರಮ NIA ತನಿಖೆ ತಕ್ಷಣ ನಿಲ್ಲಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -