Home ಟಾಪ್ ಸುದ್ದಿಗಳು ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ WIM ಮೂಡುಶೆಡ್ಡೆ ಗ್ರಾಮ ಸಮಿತಿ ಅಸ್ತಿತ್ವಕ್ಕೆ

ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ WIM ಮೂಡುಶೆಡ್ಡೆ ಗ್ರಾಮ ಸಮಿತಿ ಅಸ್ತಿತ್ವಕ್ಕೆ

ಮೂಡಬಿದ್ರೆ: ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಗ್ರಾಮ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು ಗ್ರಾಮ ಅಧ್ಯಕ್ಷೆಯಾಗಿ ರಮೀಝ, ಉಪಾಧ್ಯಕ್ಷೆಯಾಗಿ ನಿಶಾ, ಕಾರ್ಯದರ್ಶಿಯಾಗಿ ಸನಾ, ಜೊತೆ ಕಾರ್ಯದರ್ಶಿಯಾಗಿ ಜಮೀಲಾ, ಕೋಶಾಧಿಕಾರಿಯಾಗಿ ಯಾಸ್ಮಿನ್ ಹಾಗೂ ಸದಸ್ಯರಾದ ಮಿಸ್ರಿಯಾ, ಅಶ್ರುನ್ನಿಸಾ, ಝೀನತ್, ಶಮೀಮ, ಫೌಝಿಯಾ ಮತ್ತು ಶಹನಾಝ್ ಅವರು ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ವಿಮ್ ರಾಜ್ಯ ಸಮಿತಿ ಸದಸ್ಯೆ ಆಯಿಶಾ ಬಜ್ಪೆ ನಡೆಸಿಕೊಟ್ಟರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಮ್ ರಾಜ್ಯ ಸಮಿತಿ ಸದಸ್ಯೆ ಆಯಿಷಾ ಬಜ್ಪೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ “ಪ್ರಸಕ್ತ ಭಾರತದಲ್ಲಿ ಮಹಿಳೆಯರು ನಿರಂತರವಾಗಿ ಶೋಷಣೆ ಒಳಗಾಗುತ್ತಿದ್ದು ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಬಲೀಕರಣಕ್ಕಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದೆ ಹಾಗೂ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದು ರಾಜಕೀಯ ಕ್ಷೇತ್ರದಲ್ಲೂ ಕೂಡ ಆಕೆಯ ಪಾಲು ಬಹಳ ಮುಖ್ಯ ಎಂದು ಸಾಂದರ್ಭಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕಿನ ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ ನಾಯಕಿಯರು ಉಪಸ್ಥಿತರಿದ್ದರು.

Join Whatsapp
Exit mobile version