Home ಟಾಪ್ ಸುದ್ದಿಗಳು ವಿಮೆನ್ ಇಂಡಿಯಾ ಮೂಮೆಂಟ್ ಸುಳ್ಯ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ

ವಿಮೆನ್ ಇಂಡಿಯಾ ಮೂಮೆಂಟ್ ಸುಳ್ಯ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ

ಸುಳ್ಯ: ವಿಮೆನ್ ಇಂಡಿಯಾ ಮೂಮೆಂಟ್ ರಾಷ್ಟ್ರದ್ಯಂತ ಮಹಿಳೆಯರ ಹಕ್ಕುಗಳ ಬಗ್ಗೆ ಹೋರಾಟ,ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯಾಗಿ ಕಾರ್ಯಾಚರಿಸುತ್ತಿದೆ. ಇದರ ಭಾಗವಾಗಿ ವಿಮೆನ್ ಇಂಡಿಯಾ ಮೂಮೆಂಟ್ ಸುಳ್ಯ ಕ್ಷೇತ್ರ ಸಮಿತಿಯ ರಚನೆಯಾಗಿದೆ.

ಅಧ್ಯಕ್ಷರಾಗಿ ಸಬೀನಾ ಅಂಕತಡ್ಕ, ಉಪಾಧ್ಯಕ್ಷೆಯಾಗಿ ಮೀನಾಕ್ಷಿ ಸವಣೂರು, ಕಾರ್ಯದರ್ಶಿಯಾಗಿ ಅನ್ಶಿಫಾ ಶಫೀಕ್, ಜೊತೆ ಕಾರ್ಯದರ್ಶಿಯಾಗಿ ಸಮೀನಾ, ಕೋಶಾಧಿಕಾರಿಯಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯೆ ನಸೀಮಾ ಬೆಳ್ಳಾರೆ ಆಯ್ಕೆಯಾಗಿದ್ದಾರೆ.

ಹಾಗೂ ಸಮಿತಿ ಸದಸ್ಯರಾಗಿ ಮಿಸ್ರಿಯಾ ಅಂಕತ್ತಡ್ಕ, ಸಾಜಿದಾ ಸುಳ್ಯ, ಸವಣೂರು ಗ್ರಾಮ ಪಂಚಾಯತ್ ಸದಸ್ಯೆ ಚೆನ್ನು ಸವಣೂರು ನೇಮಕಗೊಂಡಿರುತ್ತಾರೆ. ಕ್ಷೇತ್ರ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ನಡೆಸಿಕೊಟ್ಟರು.

Join Whatsapp
Exit mobile version