Home ಟಾಪ್ ಸುದ್ದಿಗಳು ಮೋದಿ ಬಂದ ನಂತರ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಗ್ಯಾಸಿಂಗ್ ಠಾಕೂರ್

ಮೋದಿ ಬಂದ ನಂತರ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಗ್ಯಾಸಿಂಗ್ ಠಾಕೂರ್

ಭೋಪಾಲ್: ನರೇಂದ್ರ ಮೋದಿ ಪ್ರಧಾನಿಯಾದ 2014ರ ನಂತರ ಭಾರತಕ್ಕಷ್ಟೇ ಅಲ್ಲ, ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಬಿಜೆಪಿ ನಾಯಕಿ ಪ್ರಗ್ಯಾಸಿಂಗ್ ಠಾಕೂರ್ ಹೇಳಿದ್ದಾರೆ.


‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ನಟಿ ಕಂಗನಾರ ಹೇಳಿಕೆ ಪೂರಕವಾಗಿ 2014ರಲ್ಲಿ ಭಾರತಕ್ಕೆ ಅಷ್ಟೇ ಅಲ್ಲ ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ ದೊರಕಿದ್ದು, ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರವೇ ಮಹಿಳೆಯರಿಗೆ ಸ್ವಾತಂತ್ರ್ಯದ ಬಗ್ಗೆ ಅರಿವಾಗಿದೆ ಎಂದು ಅವರು ಹೇಳಿದ್ದಾರೆ.


2014 ರ ಮೊದಲು, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. “ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ, ಹುಡುಗಿಯರು ಮತ್ತು ಮಹಿಳೆಯರು ಮುಕ್ತವಾಗಿ ಅಧ್ಯಯನ ಮಾಡಬಹುದು, ಉದ್ಯೋಗಗಳಿಗೆ ಸೇರಬಹುದು ಅಥವಾ ತಮ್ಮ ವ್ಯವಹಾರಗಳನ್ನು ಮಾಡಬಹುದು. ಎಂದು ಸಾಧ್ವಿ ಹೇಳಿದ್ದಾರೆ.

ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಮಲೇಗಾಂವ್ ಸ್ಫೋಟ  ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುಮಾರು ಒಂಭತ್ತು ವರ್ಷ ಜೈಲಿನಲ್ಲಿದ್ದು 2017 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.  

Join Whatsapp
Exit mobile version