Home ಟಾಪ್ ಸುದ್ದಿಗಳು ಭಾವಿ ಪತಿಯನ್ನು ಬಂಧಿಸಿ, ಜೈಲಿಗಟ್ಟಿದ ಮಹಿಳಾ ಸಬ್ ಇನ್ಸ್ ಪೆಕ್ಟರ್ !

ಭಾವಿ ಪತಿಯನ್ನು ಬಂಧಿಸಿ, ಜೈಲಿಗಟ್ಟಿದ ಮಹಿಳಾ ಸಬ್ ಇನ್ಸ್ ಪೆಕ್ಟರ್ !

ಅಸ್ಸಾಂ: ನಿಶ್ಚಿತಾರ್ಥ ಮಾಡಿಕೊಂಡು ಇನ್ನು ಕೆಲವೇ ತಿಂಗಳಲ್ಲಿ ಮದುವೆಯಾಗಬೇಕಾಗಿದ್ದ ಹುಡುಗನನ್ನೇ ವಂಚನೆ ಪ್ರಕರಣದಲ್ಲಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಜೈಲಿಗೆ ಕಳುಹಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ರಾಣಾ ಪೊಗಾಗ್ ಹಲವರಿಗೆ ವಂಚಿಸಿದ್ದ. ಈ ವಿಚಾರ ಗೊತ್ತಿಲ್ಲದ ಸಬ್ ಇನ್ಸ್ ಪೆಕ್ಟರ್ ನಾಗಾವ್ ಜಿಲ್ಲೆಯ ಜುನ್ಮೋನಿ ರಾಭಾ ಕಳೆದ ಅಕ್ಟೋಬರ್ ನಲ್ಲಿ ಆತನೊಂದಿಗೆ ಎಂಗೇಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈತನ ವಂಚನೆ ಬಯಲಾಗಿದ್ದು, ಸ್ವತಃ ಭಾವಿ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ.

ರಾಣಾ ಪೊಗಾಗ್ ತಾನು ಅಸ್ಸಾಂನಲ್ಲಿ ಒಎನ್‌ಜಿಸಿ ಅಧಿಕಾರಿಯಾಗಿದ್ದು, ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರ ಬಳಿ ಹಣ ಕೇಳುತ್ತಿದ್ದ. ಪೋಲೀಸರ ಪ್ರಕಾರ ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋದು ಬಯಲಾಗಿದೆ.

ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

 

Join Whatsapp
Exit mobile version