ಅಮರಾವತಿ: ಜನರು ಮೃತದೇಹವನ್ನೆತ್ತಲು ಮುಂದೆ ಬಾರದ ಪರಿಣಾಮ ಮಹಿಳಾ ಎಸ್ಸೈಯೊಬ್ಬರು ಅರುವತ್ತು ವರ್ಷದ ಹಿರಿಯ ವ್ಯಕ್ತಿಯ ಮೃತದೇಹವನ್ನು ಕಾನ್ಸ್ಟೇಬಲ್ ಗಳ ಸಹಾಯದೊಂದಿಗೆ ಕಾಡಿನ ದಾರಿಯಲ್ಲಿ ಮೂರು ಕಿ.ಮೀವರೆಗೆ ಹೆಗಲಲ್ಲಿ ಹೊತ್ತು ಸಾಗಿಸಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಹನ್ಮಂತುನಿಪೇಟ್ ನಲ್ಲಿ ನಡೆದಿದೆ.
ಕಾಡಿನಲ್ಲಿ ಮೃತದೇಹ ಸಿಕ್ಕಿದೆ ಎಂದು ಪೊಲೀಸರಿಗೆ ತಿಳಿಸಿದ ಊರ ಮಂದಿ, ಮೃತದೇಹವನ್ನು ಕಾಡಿನಿಂದ ಹೊರಗೆ ತರಲು ಹಿಂಜರಿಯುತ್ತಿದ್ದರು. ಈ ವೇಳೆ ಮಹಿಳಾ ಎಸ್ಸೈ ಕೃಷ್ಣಾ ಪವಾನಿಯವರು ಧೈರ್ಯ ವಹಿಸಿ ಮೃತದೇಹವನ್ನು ಕಾನ್ಸ್ಟೇಬಲ್ ಗಳ ನೆರವಿನಿಂದ ಕಾಡಿನಿಂದ ಹೊರಗೆ ತಂದಿದ್ದಾರೆ.
ಈ ಹಿಂದೆ ಶ್ರೀಕುಳಂ ಜಿಲ್ಲೆಯಲ್ಲಿ ಎಸ್ಸೈ ಶಿರಿಶ ಎಂಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇದೇ ರೀತಿ ಎರಡು ಕಿಲೊಮೀಟರ್ ದೂರ ಮೃತಹದೇಹವನ್ನು ಹೊತ್ತು ನಡೆದು ಪ್ರಶಂಸೆಗೆ ಪಾತ್ರರಾಗಿದ್ದರು.