ತುಮಕೂರು: ಟೀ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ದೇವರಾಯನದುರ್ಗ ಪ್ರದೇಶದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಎದುರು ಟೀ ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಉರ್ಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಸಲ ನಡೆದ ಚುನಾವಣೆಯಲ್ಲಿ ದೇವರಾಯನದುರ್ಗದಿಂದ ಉರ್ಡಿಗೆರೆ ಗ್ರಾ ಪಂಗೆ ಸದಸ್ಯರಾಗಿ ಚುನಾಯಿತರಾಗಿದ್ದ ಕೆ.ಎಸ್. ಅನ್ನಪೂರ್ಣಮ್ಮ ಅವರಿಗೆ ಗುರುವಾರ ನಡೆದ ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಗ್ರಾಪಂ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಗೊಳಿಸಿದರು. ಅನ್ನಪೂರ್ಣಮ್ಮ ಗ್ರಾಪಂ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದಂತೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.
ಗ್ರಾ ಪಂ ಅಧ್ಯಕ್ಷೆಯಾದರೂ ಚಹಾ ಮಾರೋದು ಬಿಡಲಿಲ್ಲ: ಅನ್ನಪೂರ್ಣಮ್ಮ ಅವರು ಗ್ರಾ ಪಂ ಅಧ್ಯಕ್ಷೆಯಾದ್ರೂ ಚಹ ಮಾರೋದು ಬಿಡಲಿಲ್ಲ. ಅನ್ನಪೂರ್ಣಮ್ಮ ಹೊಟ್ಟೆ ಪಾಡಿಗೆ ಚಹಾ, ಗ್ರಾಮದ ಸೇವೆಗಾಗಿ ಗ್ರಾ ಪಂ ಅಧ್ಯಕ್ಷೆ ಸ್ಥಾನ ಅಲಂಕರಿಸಿ, ಕಾರ್ಯ ನಿರ್ವಹಣೆಯನ್ನೂ ಮುಂದುವರೆಸಿದ್ದಾರೆ.