ಹಾಡ ಹಗಲೇ ಮಹಿಳೆ ಹತ್ಯೆ: ಬೈಕ್‌ನಲ್ಲಿ ಬಂದ ಇಬ್ಬರಿಂದ ಕೃತ್ಯ: ನಗ-ನಾಣ್ಯ ದೋಚಿ ಪರಾರಿ

Prasthutha|

ಹಾಸನ: ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಹಾಡು ಹಗಲೇ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

- Advertisement -

ಜ್ಯುವೆಲ್ಲರಿ ಶಾಪ್ ನಡೆಸುತ್ತಿರುವ ಕುಮಾರ್ ಎಂಬವರ ಪತ್ನಿ ಮಂಜುಳಾ(42) ಕೊಲೆಯಾದ ಮಹಿಳೆ.

ಬೈಕ್‌ನಲ್ಲಿ ಬಂದ ಇಬ್ಬರು, ಏಕಾಏಕಿ ಮನೆಗೆ ನುಗ್ಗಿ ಕುತ್ತಿಗೆ ಬಿಗಿದು ಮಹಿಳೆಯನ್ನು ಹತ್ಯೆಗೈದು ನಂತರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಗೆ ನುಗ್ಗಿದ ಇಬ್ಬರು ಖದೀಮರು, ಮಂಜುಳಾ ಅವರನ್ನು ಬೆದರಿಸಿ ಲಾಕರ್ ಕೀ ಪಡೆದು ಮನೆಯಲ್ಲಿದ್ದ ಚಿನ್ನ, ಹಣವನ್ನು ದೋಚಿದ ನಂತರ ಆಕೆಯ ಜೀವ ತೆಗೆದು ಅಲ್ಲಿಂದ ಓಡಿ ಹೋಗಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪತಿ ಕುಮಾರ್, ಮನೆಗೆ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಗೊತ್ತಾಗಿದೆ.

- Advertisement -


ಸುದ್ದಿ ತಿಳಿದು ಪೆನ್‌ಶೆನ್ ಮೊಹಲ್ಲಾ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀರಿ ಪರಿಶೀಲನೆ ನಡೆಸಿತು. ಹಗಲು ವೇಳೆಯಲ್ಲೇ ನಡೆದಿರುವ ಘಟನೆ ನಗರವಾಸಿಗಳನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ.

ಲಕ್ಷ್ಮೀಪುರ ಬಡಾವಣೆಯ ಜ್ಯುವೆಲ್ಲರಿ ಮಾಲೀಕನ ಪತ್ನಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.


ತನಿಖೆ ಕೈಗೊಂಡಿರುವ ಪೆನ್‌ಶೆನ್ ಮೊಹಲ್ಲಾ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ. ಪರಿಚಯಸ್ಥರೇ ಮಂಜುಳಾ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.


ಏಕೆಂದರೆ ಮನೆಯಲ್ಲಿ ಒಬ್ಬರೇ ಇರುತ್ತಿದ್ದ ಮಂಜುಳಾ, ಯಾರೇ ಬಂದರೂ ಬಾಗಿಲು ತೆರೆಯುತ್ತಿರಲಿಲ್ಲ. ಶುಕ್ರವಾರ ಪರಿಚಯ ಇದ್ದವರು ಬಂದಿದ್ದರಿಂದ ಬಾಗಿಲು ತೆರೆದು ಕಾಫಿ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಅದಾದ ಬಳಿಕ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ಮತ್ತು ನಗದು ಇರುವುದನ್ನು ಮೊದಲೇ ತಿಳಿದಿದ್ದ ಖದೀಮರು, ಮಂಜುಳಾ ಅವರನ್ನು ಹೆದರಿಸಿ ಲಾಕರ್ ಕೀ ಪಡೆದು ಸುಮಾರು 1 ಕೆಜಿಯಷ್ಟು ಚಿನ್ನ, 5 ಲಕ್ಷ ರೂ. ನಗದು ಹಾಗೂ ಬೆಳ್ಳಿ ಆಭರಣ ದೋಚಿದ್ದಾರೆ. ನಂತರ ತಾವು ಮಾಡಿದ ಕೃತ್ಯ ಇವರಿಂದ ಬಯಲಾಗಲಿದೆ ಎಚಂದೆಣಿಸಿ, ಮಂಜುಳಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.

ಈ ಎಲ್ಲಾ ಮಾಹಿತಿ ಸಂಗ್ರಹಿಸಿದ ಪೊಲೀಸರು ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



Join Whatsapp