Home ಟಾಪ್ ಸುದ್ದಿಗಳು ಪ್ರಿಯತಮನೊಂದಿಗೆ ಸೇರಿ ಪತಿಯ ಹತ್ಯೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಪ್ರಿಯತಮನೊಂದಿಗೆ ಸೇರಿ ಪತಿಯ ಹತ್ಯೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಜಮ್ಶೆಡ್’ಪುರ್; ಪತಿಯನ್ನು ಹತ್ಯೆಗೈದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿ ಮೂವರಿಗೆ ಜಾರ್ಖಂಡ್’ನ‌ ಜಿಲ್ಲಾ ನ್ಯಾಯಾಲಯವೊಂದು
ಜೀವಾವಧಿ ಶಿಕ್ಷೆ ಹಾಗೂ ತಲಾ 7 ಸಾವಿರ ರೂಪಾಯಿ ದಂಡ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರಾಜೇಂದ್ರ ಕುಮಾರ್ ಸಿನ್ಹಾ ನೀಡಿರುವ ತೀರ್ಪಿನಲ್ಲಿ, ಕೊಲೆಯಾದ ವ್ಯಕ್ತಿಯ ಪತ್ನಿ ಶ್ವೇತಾ ದಾಸ್, ಆಕೆಯ ಪ್ರಿಯತಮ ಸುಮಿತ್ ಸಿಂಗ್ ಹಾಗೂ ಸೋನು ಲಾಲ್’ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ

ಘಟನೆಯ ಹಿನ್ನೆಲೆ
ಜಮ್ಶೇಡ್’ಪುರದ ಟೆಲ್ಕೊ ಪ್ರದೇಶದ ನಿವಾಸಿಯಾಗಿದ್ದ ತಪನ್ ದಾಸ್ ಎಂಬಾತನ‌ ಶವವು, 2019, ಜನವರಿ 12ರಂದು ಬಾರಾಬಂಖಿ ಎಂಬಲ್ಲಿ ಪೊದೆಯೊಂದರಲ್ಲಿ ಫ್ರಿಡ್ಜ್’ನಲ್ಲಿರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ತನಿಖೆ ಆರಂಭಿಸಿದ್ದ ಪೊಲೀಸರಿಗೆ ಆಟೋರಿಕ್ಷಾದಲ್ಲಿ ಬಂದ ಮೂವರು ಕೃತ್ಯ ಎಸಗಿರುವುದನ್ನು CCTV ದೃಶ್ಯಾವಳಿಗಳ ಆಧಾರದಲ್ಲಿ ಪತ್ತೆಹಚ್ಚಿದ್ದರು.

ಬಳಿಕ ಕೃತ್ಯ ನಡೆದ ದಿನದಂದು ಆರೋಪಿಗಳು ಅದೇ ಸ್ಥಳದಲ್ಲಿದ್ದರು ಎಂಬುದು ಮೊಬೈಲ್ ಟವರ್ ಲೊಕೇಶನ್ ಪರಿಶೋಧಿಸಿದಾಗ ಪೊಲೀಸರಿಗೆ ಧೃಡಪಟ್ಟಿತ್ತು.

Join Whatsapp
Exit mobile version