Home ಗಲ್ಫ್ ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗ್ರಾಂಗೆ ಹಾಕಿದ ಮಹಿಳೆಗೆ ಭಾರೀ ದಂಡ!

ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗ್ರಾಂಗೆ ಹಾಕಿದ ಮಹಿಳೆಗೆ ಭಾರೀ ದಂಡ!

ದುಬೈ: ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಮಹಿಳೆಗೆ ದುಬೈ ನ್ಯಾಯಾಲಯ 41 ಸಾವಿರ ರೂಪಾಯಿ ದಂಡ ವಿಧಿಸಿದೆ.


ಪತಿ ಜೊತೆ ಚಾಟಿಂಗ್ ಮಾಡಿದ ಸ್ಕ್ರೀನ್ ಶಾಟ್ ಹಾಗೂ ಪತಿಯ ನಂಬರನ್ನು ಮಹಿಳೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಳು. ಈ ಕುರಿತು ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಗೌಪ್ಯತೆಗೆ ಅಡ್ಡಿಯಾಗಿದೆ ಎಂದು ದೂರು ನೀಡಿದ್ದ.


ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಮಹಿಳೆ,ಇದನ್ನು ನಿರಾಕರಿಸಿ ಅಪ್ಲಿಕೇಶನ್ ಬಳಕೆ ವೇಳೆ ಈ ಯಡವಟ್ಟಾಗಿದೆ ಎಂದಿದ್ದಳು. ಆದರೆ ಕೊನೆಯಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದಳು.

ವಿಚಾರಣೆ ಪೂರ್ಣಗೊಳಿಸಿದ ದುಬೈ ಕೋರ್ಟ್ ಮಹಿಳೆಗೆ 41 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದಲ್ಲದೆ ಪ್ರಕರಣದ ಹೆಚ್ಚುವರಿ ವಿಚಾರಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ.

Join Whatsapp
Exit mobile version