Home ಟಾಪ್ ಸುದ್ದಿಗಳು ಹದಗೆಟ್ಟ ಚಾಲಕನ ಆರೋಗ್ಯ; ಧೈರ್ಯದಿಂದ ಟೆಂಪೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಮಹಿಳೆ

ಹದಗೆಟ್ಟ ಚಾಲಕನ ಆರೋಗ್ಯ; ಧೈರ್ಯದಿಂದ ಟೆಂಪೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಮಹಿಳೆ

ಪುಣೆ: ಪ್ರವಾಸಕ್ಕೆ ತೆರಳಿದ್ದ ವೇಳೆ ಟೆಂಪೋ ಟ್ರಾವೆಲರ್ ಚಾಲಕ ಅನಾರೋಗ್ಯಕ್ಕೀಡಾಗಿದ್ದು, ಈ ವೇಳೆ ವಾಹನದಲ್ಲಿದ್ದ ಮಹಿಳೆಯೋರ್ವರು ಧೈರ್ಯದಿಂದ ಟೆಂಪೋ ಟ್ರಾವೆಲರ್ ಚಲಾಯಿಸಿ, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಪುಣೆ ಸಮೀಪ ನಡೆದಿದೆ.


ಯೋಗಿತಾ ಧರ್ಮೇಂದ್ರ ಸತವ್ ಎಂಬ ಮಹಿಳೆಯು ಟೆಂಪೋ ಟ್ರಾವೆಲರ್ ಚಲಾಯಿಸುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ

ಪುಣೆಯ ವಾಘೋಲಿಯಿಂದ 20ಕ್ಕೂ ಹೆಚ್ಚು ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಪ್ರವಾಸಕ್ಕೆ ತೆರಳಿ, ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಡ್ರೈವರ್ ಸೀಟ್’ನಲ್ಲಿ ಕುಳಿತ ಯೋಗಿತಾ, ಧೈರ್ಯದಿಂದ ಟೆಂಪೋ ಟ್ರಾವೆಲರ್ ಚಲಾಯಿಸಿ ಚಾಲಕನ ಪ್ರಾಣ ಉಳಿಸಿದ್ದಾರೆ.

ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಮತ್ತೊಬ್ಬ ಚಾಲಕನನ್ನು ನೇಮಿಸಿ ಯೋಗಿತಾ ಹಾಗೂ ಸಂಗಡಿಗರು ಸುರಕ್ಷಿತವಾಗಿ ವಾಘೋಲಿಗೆ ತಲುಪಿದರು. ಘಟನೆ ಬಗ್ಗೆ ತಿಳಿದ ವಾಘೋಲಿ ಗ್ರಾಮದ ಮಾಜಿ ಸರಪಂಚರಾದ ಜಯಶ್ರೀ ಸತವ್ ಪಾಟೀಲ್, ಯೋಗಿತಾ ಸಾತವ್ ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದರು.

Join Whatsapp
Exit mobile version