Home ಟಾಪ್ ಸುದ್ದಿಗಳು ಮೆಟ್ರೋ ನಿಲ್ದಾಣದ 40 ಅಡಿ ಎತ್ತರದಿಂದ ಜಿಗಿದ ಯುವತಿ ಸಾವು !

ಮೆಟ್ರೋ ನಿಲ್ದಾಣದ 40 ಅಡಿ ಎತ್ತರದಿಂದ ಜಿಗಿದ ಯುವತಿ ಸಾವು !

ನವದೆಹಲಿ: ದೆಹಲಿಯ ಅಕ್ಷರಧಾಮ ಮೆಟ್ರೋ ನಿಲ್ದಾಣದ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಮೃತಪಟ್ಟಿದ್ದು, ಸಿಐಎಸ್ ಎಫ್ ಸಿಬ್ಬಂದಿ ರಕ್ಷಿಸಿದರು ಸಹ ಆಕೆ ಬದುಕುಳಿಯಲಿಲ್ಲ.

ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಪಂಜಾಬ್ ಮೂಲದವರು ಎಂದು ಗುರುತಿಸಲಾಗಿದೆ. ಆಕೆಗೆ 20 ರಿಂದ 22 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ನಿಲ್ದಾಣದ ಪ್ಲಾಟ್ಫಾರಂ ನಂಬರ್ 2ರ ಕಟ್ಟಡದ ಮೇಲೇರಿ ಯುವತಿ ನಿಂತಿದ್ದನ್ನು ಗಮನಿಸಿದ ಕೆಲವರು ಸೆಕ್ಯೂರಿಟಿ ಫೋರ್ಸ್ ಗೆ ಮಾಹಿತಿ ತಿಳಿಸಿದ್ದಾರೆ. ಸಿಐ ಎಸ್ ಎಫ್ ಸಿಬ್ಬಂದಿ ಈ ಮಾಹಿತಿಯನ್ನು ತಕ್ಷಣವೇ ಶಿಫ್ಟ್ ಇಂಚಾರ್ಚ್ ಗೆ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಮಹಿಳೆಯನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಯತ್ನಿಸಿದರು. ಆದರೂ ಸಹ ಆಕೆ ಅವರ ಮನವಿಗೆ ಕಿವಿಗೊಡಲಿಲ್ಲ.

ಸಾಧ್ಯವಿರುವ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಮತ್ತು ಆತ್ಮಹತ್ಯೆ ಮಾಡಿಕೊಳ್ಳಬೇಡ ಎಂದು ಎಷ್ಟೇ ಬುದ್ಧಿ ಮಾತು ಹೇಳಿದರೂ  ಸಹ ಆ ಯುವತಿ ಮೇಲಿಂದ ಕೆಳಗೆ ಜಿಗಿದಿದ್ದಾಳೆ ಆದರೆ ಆಕೆ ಬದುಕುಳಿಯಲಿಲ್ಲ ಎಂದು ಸಿಐಎಸ್ ಎಫ್ ವಕ್ತಾರರು ತಿಳಿಸಿದ್ದಾರೆ.

Join Whatsapp
Exit mobile version