Home ಟಾಪ್ ಸುದ್ದಿಗಳು ಚಲಿಸುತ್ತಿದ್ದ KRSTC ಬಸ್​ನಿಂದ ಬಿದ್ದು ಮಹಿಳೆ ಮೃತ್ಯು

ಚಲಿಸುತ್ತಿದ್ದ KRSTC ಬಸ್​ನಿಂದ ಬಿದ್ದು ಮಹಿಳೆ ಮೃತ್ಯು

ಚಾಮರಾಜನಗರ: ಮಹಿಳೆಯೊಬ್ಬರು ಕೆಎಸ್​ಆರ್​ಟಿಸಿ ಬಸ್​ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ವಿನೋದಾ ಎನ್ನುವ ಮಹಿಳೆ ಹನೂರು ತಾಲೂಕಿನ ಮಲೆಮಹಾದೇಶ್ವರ ಬೆಟ್ಟದಿಂದ ಹನೂರು ಕಡೆ ತೆರಳುತ್ತಿದ್ದ ಸಾರಿಗೆ ಬಸ್​ನಿಂದ ಬಿದ್ದು ಮೃತಪಟ್ಟಿದ್ದಾರೆ.

ನಿನ್ನೆ(ಆಗಸ್ಟ್ 28) ಮಾಧ್ಯಾಹ್ನ ಮಾದಪ್ಪನ ದರ್ಶನ ಪಡೆದು ಮನೆ ಹಿಂದಿರುಗುವಾಗ, ಬಸ್​ನ ಹಿಂಬಾಗದ ಬಾಗಿಲಲ್ಲಿ ನಿಂತಿದ್ದ ವಿನೋದಾ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version