Home ಟಾಪ್ ಸುದ್ದಿಗಳು ಕಡಬ: ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

ಕಡಬ: ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

ಮಂಗಳೂರು: ತೆಂಗಿನ ಮರದಿಂದ ಬಿದ್ದು 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಡಬ ತಾಲ್ಲೂಕಿನ ಸವಣೂರು ಸಮೀಪದ ಗ್ರಾಮದಲ್ಲಿ ನಡೆದಿದೆ.


ಮೃತರನ್ನು ಸುಚಿತ್ರಾ ಎಂದು ಗುರುತಿಸಲಾಗಿದೆ.


ಸುಚಿತ್ರಾ ಅವರು ತೆಂಗಿನ ಮರ ಹತ್ತುವ ಮತ್ತು ತೆಂಗಿನಕಾಯಿ ಕೀಳುವ ಪರಿಣತಿಗೆ ಹೆಸರುವಾಸಿಯಾಗಿದ್ದು, ಬುಧವಾರ ಕೆಲಸ ಮಾಡುವಾಗ ಮರದಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುಚಿತ್ರಾ ಅವರು ತೆಂಗಿನ ಮರ ಹತ್ತುವ ಅವರ ಸಾಧನೆಯನ್ನು ಗುರುತಿಸಿ ವಿವಿಧ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

Join Whatsapp
Exit mobile version