Home ಟಾಪ್ ಸುದ್ದಿಗಳು ಮಕ್ಕಳಿಗೆ ವಿಷ ಕುಡಿಸಿ ಮಹಿಳೆ ಆತ್ಮಹತ್ಯೆ

ಮಕ್ಕಳಿಗೆ ವಿಷ ಕುಡಿಸಿ ಮಹಿಳೆ ಆತ್ಮಹತ್ಯೆ

ಬೆಂಗಳೂರು: ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಹೊಸ ಪಾಳ್ಯದಲ್ಲಿ ನಡೆದಿದೆ.

ಮೃತರನ್ನು ಮಾಗಡಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸ ಪಾಳ್ಯ ಗ್ರಾಮದ ಲೋಕೇಶ್​ ಅವರ ಪತ್ನಿ ರೂಪಾ (38) ಹಾಗೂ ಮಕ್ಕಳಾದ  ಹರ್ಷಿತ(6) ಸ್ಪೂರ್ತಿ (4 ) ಎಂದು ಗುರುತಿಸಲಾಗಿದೆ.

ಗ್ರಾಮದ ಹೊರವಲಯದ ಜಮೀನಿನ ಬಳಿ ಮೊದಲಿಗೆ ರೂಪ ತಮ್ಮ ಮಕ್ಕಳಿಬ್ಬರಿಗೆ ವಿಷ ಕುಡಿಸಿ ನಂತರ ತಾವೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version