ಜಾತಿ ಹೆಸರಿನಲ್ಲಿ ಕಿರುಕುಳ: ಮಹಿಳೆ ಆತ್ಮಹತ್ಯೆ

Prasthutha|

ತುಮಕೂರು: ಸರ್ಕಾರದಿಂದ ಸೌಲಭ್ಯ ಪಡೆಯಬಹುದು ಎಂಬ ಒಂದೇ ಕಾರಣಕ್ಕೆ ಪರಿಶಿಷ್ಟ ಜಾತಿಯವಳನ್ನು ಮದುವೆಯಾಗಿ ನಂತರ ಜಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ  ಗಂಡನ ಹಿಂಸೆ ತಾಳದೆ ಮಹಿಳೆಯೊಬ್ಬಳು  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಅನುಪನಹಳ್ಳಿಯಲ್ಲಿ ನಡೆದಿದೆ.

- Advertisement -

ಗೌರಮ್ಮಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ತುಮಕೂರು ಹೊರವಲಯದ ಮಂಚಗೊಂಡನಹಳ್ಳಿಯ ನಿವಾಸಿಯಾಗಿರುವ ಗೌರಮ್ಮ ಅವರ ವಿವಾಹವು ಒಂದು ವರ್ಷದ ಹಿಂದೆಯಷ್ಟೇ ಅನುಪನಹಳ್ಳಿಯ ನಿವಾಸಿ ರವಿತೇಜ ಎಂಬಾತನ ಜತೆ ನಡೆದಿತ್ತು. ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರವಿತೇಜ, ಗೌರಮ್ಮಾ ಪರಿಶಿಷ್ಟ ಜಾತಿ ಎಂದು ತಿಳಿದು ಸರ್ಕಾರದಿಂದ ಸಿಗುವ ಮೂರು ಲಕ್ಷ ರೂಪಾಯಿಯನ್ನೂ ಪಡೆದುಕೊಂಡು ಮದುವೆಯಾಗಿದ್ದ. ಆದರೆ ನಂತರ  ಜಾತಿಯ ಹೆಸರಿನಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಗೌರಮ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

ಘಟನೆ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version