Home ಟಾಪ್ ಸುದ್ದಿಗಳು ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ನೋಯ್ಡಾ: ಮಹಿಳೆಯೊಬ್ಬಳು ಆಟೋ ಚಾಲಕನಿಗೆ ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಈ ಘಟನೆಯು ಶನಿವಾರ ಬೆಳಗ್ಗೆ ಉತ್ತರ ಪ್ರದೇಶದ ನೋಯ್ಡಾದ ಮಾರುಕಟ್ಟೆ ಒಂದರಲ್ಲಿ ನಡೆದಿದ್ದು, ಆಟೋದ ಒಂದು ಭಾಗ ಕಾರಿಗೆ ಡಿಕ್ಕಿಯಾಗಿದ್ದರಿಂದ ಆಟೋ ಚಾಲಕನ ಮೇಲೆ ತನ್ನ ಸಿಟ್ಟನೆಲ್ಲ ತೀರಿಸಿಕೊಂಡಿದ್ದಾಳೆ.


ಸಂತ್ರಸ್ತ ಆಟೋ ಚಾಲಕ ಮಿಥುನ್ ದೂರು ನೀಡಿದ ಬೆನ್ನಲ್ಲೇ ಶ್ರಮಿಕ್ ಕುಂಜ್ ನಿವಾಸಿಯಾಗಿರುವ ಆರೋಪಿ ಕಿರಣ ಸಿಂಗ್ ರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version