Home ಟಾಪ್ ಸುದ್ದಿಗಳು ಮಹಿಳೆಯರನ್ನು ಅವಮಾನಿಸಿದ ಕಲ್ಲಡ್ಕ ಭಟ್ ವಿರುದ್ಧ ಬಂಟ್ವಾಳ ಪೋಲೀಸ್ ಠಾಣೆಯಲ್ಲಿ WIM ನಿಂದ ದೂರು ದಾಖಲು

ಮಹಿಳೆಯರನ್ನು ಅವಮಾನಿಸಿದ ಕಲ್ಲಡ್ಕ ಭಟ್ ವಿರುದ್ಧ ಬಂಟ್ವಾಳ ಪೋಲೀಸ್ ಠಾಣೆಯಲ್ಲಿ WIM ನಿಂದ ದೂರು ದಾಖಲು

ಬಂಟ್ವಾಳ: ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ WIM ದೂರು ದಾಖಲಿಸಿದೆ.

ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರುವಂತಹ ಮಾತುಗಳನ್ನು ಆಡಿರುವ ಕಲ್ಲಡ್ಕ ಪ್ರಭಾಕರ ಭಟ್ ಎಂಬಾತನ ವಿರುದ್ದ WIM ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಶಮೀಮರವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರನ್ನು ನೀಡಿದರು.

ಈ ಸಂದರ್ಭದಲ್ಲಿ WIM ಜಿಲ್ಲಾಧ್ಯಕ್ಷರಾದ ನೌರಿನ್ ಆಲಂಪಾಡಿ, WIM ಜಿಲ್ಲಾ ಉಪಾಧ್ಯಕ್ಷರಾದ ಝಹನಾ ಬಂಟ್ವಾಳ ಉಪಸ್ಥಿತರಿದ್ದರು.

Join Whatsapp
Exit mobile version